ಸುಡಾನ್ | ಚಿನ್ನದ ಗಣಿ ಕುಸಿದು 11 ಮಂದಿ ಮೃತ್ಯು; 7 ಮಂದಿಗೆ ಗಾಯ

ಖರ್ಟೌಮ್: ಯುದ್ಧದಿಂದ ಜರ್ಝರಿತಗೊಂಡಿರುವ ಸುಡಾನ್ ನ ಈಶಾನ್ಯದಲ್ಲಿ ಸಾಂಪ್ರದಾಯಿಕ ಚಿನ್ನದ ಗಣಿ ಭಾಗಶಃ ಕುಸಿದು 11 ಕಾರ್ಮಿಕರು ಸಾವನ್ನಪ್ಪಿದ್ದಾರೆ. ದುರಂತದಲ್ಲಿ ಇತರ 7 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಸುಡಾನ್ ನಲ್ಲಿ ಸೇನಾ ಪಡೆ ಮತ್ತು ಅರೆ ಸೇನಾಪಡೆಯ ನಡುವೆ 2023ರ ಎಪ್ರಿಲ್‍ನಿಂದ ಸಂಘರ್ಷ ನಡೆಯುತ್ತಿದೆ. ಸೇನೆಯ ನಿಯಂತ್ರಣದಲ್ಲಿರುವ ಈಶಾನ್ಯದ ರೆಡ್ ಸೀ ರಾಜ್ಯದ ಅಟ್ಬಾರ ಮತ್ತು ಹೈಯಾ ನಗರಗಳ ನಡುವೆ ಇರುವ ಕಿರ್ಶ್ ಅಲ್-ಫಿಲ್ ಗಣಿಯ ಆಳದಲ್ಲಿ ದುರಂತ ಸಂಭವಿಸಿದೆ ಎಂದು `ಸುಡಾನೀಸ್ ಮಿನರಲ್ ರಿಸೋರ್ಸಸ್ ಕಂಪೆನಿ(ಎಸ್‍ಎಂಆರ್‍ಸಿ) ಹೇಳಿದೆ. ಸೇನೆ ಮತ್ತು ಅರೆ ಸೇನಾಪಡೆಯ ನಡುವೆ ಇದೀಗ ಮೂರನೇ ವರ್ಷಕ್ಕೆ ಮುಂದುವರಿದಿರುವ ಯುದ್ಧವು ದೇಶದ ಅರ್ಥವ್ಯವಸ್ಥೆಯನ್ನು ಛಿದ್ರಗೊಳಿಸಿದ್ದರೂ 2024ರಲ್ಲಿ ದಾಖಲೆ 64 ಟನ್‍ಗಳಷ್ಟು ಚಿನ್ನ ಉತ್ಪಾದನೆಯಾಗಿದೆ ಎಂದು ಸೇನೆ ಬೆಂಬಲಿತ ಸರ್ಕಾರ ಹೇಳಿದೆ.
Next Story





