ಸುಡಾನ್ | ಅಪೌಷ್ಟಿಕತೆಯಿಂದ ಕನಿಷ್ಠ 63 ಮಂದಿ ಮೃತ್ಯು

ಸಾಂದರ್ಭಿಕ ಚಿತ್ರ(file photo:PTI)
ಖಾರ್ಟೌಮ್, ಆ.11: ಸುಡಾನ್ನಲ್ಲಿ ಅರೆ ಸೇನಾಪಡೆಯಿಂದ ಮುತ್ತಿಗೆಗೆ ಒಳಗಾಗಿರುವ ಎಲ್ ಫಾಶರ್ ನಗರದಲ್ಲಿ ಒಂದೇ ವಾರದಲ್ಲಿ ಅಪೌಷ್ಟಿಕತೆಯಿಂದ ಕನಿಷ್ಠ 63 ಮಂದಿ ಸಾವನ್ನಪ್ಪಿರುವುದಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಮೃತಪಟ್ಟವರಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಪೌಷ್ಟಿಕತೆ ಸಮಸ್ಯೆಯಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಿರುವ ಸಾಧ್ಯತೆಯಿದೆ. ಯಾಕೆಂದರೆ ಈ ಅಂಕಿಅಂಶಗಳು ಆಸ್ಪತ್ರೆಗೆ ದಾಖಲಾದವರನ್ನು ಮಾತ್ರ ಒಳಗೊಂಡಿದೆ. ಕೆಲವು ಕುಟುಂಬದವರು ವೈದ್ಯಕೀಯ ನೆರವು ಪಡೆಯಲು ಸಾಧ್ಯವಾಗದೆ ಮೃತಪಟ್ಟವರ ಅಂತ್ಯಸಂಸ್ಕಾರ ನಡೆಸಿರುವ ಮಾಹಿತಿಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 2023ರ ಎಪ್ರಿಲ್ನಿಂದ ಸುಡಾನ್ನ ಸಶಸ್ತ್ರ ಪಡೆಯೊಂದಿಗೆ ಸಂಘರ್ಷದಲ್ಲಿ ನಿರತರಾಗಿರುವ ಅರೆ ಸೇನಾಪಡೆ ಕಳೆದ ವರ್ಷದ ಮೇ ತಿಂಗಳಿನಿಂದ ಎಲ್-ಫಾಶರ್ ನಗರದ ಮೇಲೆ ಮುತ್ತಿಗೆ ಹಾಕಿದೆ.
Next Story





