ಸುಡಾನ್: ಆಸ್ಪತ್ರೆಯ ಬಳಿ ಬಾಂಬ್ ದಾಳಿಯಲ್ಲಿ ಐದು ಮಂದಿ ಮೃತ್ಯು

ಸಾಂದರ್ಭಿಕ ಚಿತ್ರ
ಪೋರ್ಟ್ ಸುಡಾನ್: ಸುಡಾನ್ನ ಒಮ್ಡರ್ಮನ್ ನಗರದಲ್ಲಿ ಕಾರ್ಯಾಚರಿಸುತ್ತಿರುವ ಕೊನೆಯ ವೈದ್ಯಕೀಯ ಸೌಲಭ್ಯದ ಬಳಿ ಮಂಗಳವಾರ ಸುಡಾನ್ನ ಅರೆಸೇನಾ ಪಡೆ ನಡೆಸಿದ ಬಾಂಬ್ ದಾಳಿಯಲ್ಲಿ ಐವರು ಸಾವನ್ನಪ್ಪಿರುವುದಾಗಿ ವೈದ್ಯಕೀಯ ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
2023ರ ಎಪ್ರಿಲ್ನಿಂದ ಸುಡಾನ್ನಲ್ಲಿ ಸೇನೆ ಹಾಗೂ ಅರೆಸೇನಾ ಪಡೆಯ(ರ್ಯಾಪಿಡ್ ಸಪೋರ್ಟ್ ಫೋರ್ಸಸ್) ನಡುವೆ ತೀವ್ರ ಸಂಘರ್ಷ ನಡೆಯುತ್ತಿದೆ. ಮಂಗಳವಾರ ಅರೆಸೇನಾ ಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಅಲ್-ನವೊ ಆಸ್ಪತ್ರೆಯ ಬಳಿಯ ಉದ್ಯಾನವನದ ಮೇಲೆ ಬಾಂಬ್ ಬಿದ್ದಿದೆ. ಮೃತಪಟ್ಟವರಲ್ಲಿ ಆಸ್ಪತ್ರೆಯ ಸಿಬ್ಬಂದಿಗಳೂ ಸೇರಿದ್ದಾರೆ ಎಂದು ವರದಿ ಹೇಳಿದೆ.
ಸುಡಾನ್ ಸೇನೆಯ ನಿಯಂತ್ರಣದಲ್ಲಿರುವ ಗ್ರೇಟರ್ ಖಾರ್ಟೂಮ್ ಪ್ರದೇಶದಲ್ಲಿರುವ ಆಸ್ಪತ್ರೆಯ ಮೇಲೆ ಹಲವಾರು ಬಾರಿ ದಾಳಿ ನಡೆದಿದೆ. ಒಮ್ಡರ್ಮನ್ ನಗರದ ಮಾರುಕಟ್ಟೆ ಮೇಲೆ ಶನಿವಾರ ಆರ್ಎಸ್ಎಫ್ ನಡೆಸಿದ ಬಾಂಬ್ದಾಳಿಯಲ್ಲಿ ಕನಿಷ್ಟ 60 ಮಂದಿ ಸಾವನ್ನಪ್ಪಿದ್ದರು. ಪಶ್ಚಿಮ ಮತ್ತು ದಕ್ಷಿಣ ಸುಡಾನ್ನ ಬಹುತೇಕ ಪ್ರದೇಶ ಆರ್ಎಸ್ಎಫ್ ನಿಯಂತ್ರಣದಲ್ಲಿದ್ದರೆ ಪೂರ್ವ ಮತ್ತು ಉತ್ತರ ಸುಡಾನ್ ಮೇಲೆ ಸೇನೆ ನಿಯಂತ್ರಣ ಸಾಧಿಸಿದೆ.