ಇಸ್ಲಾಮಾಬಾದ್ ನ್ಯಾಯಾಲಯದ ಹೊರಗೆ ಆತ್ಮಾಹುತಿ ಬಾಂಬ್ ದಾಳಿ: 12 ಮೃತ್ಯು; 20 ಮಂದಿಗೆ ಗಾಯ

Photo:ndtv
ಇಸ್ಲಾಮಾಬಾದ್, ನ.11: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನ ನ್ಯಾಯಾಲಯದ ಹೊರಗೆ ಮಂಗಳವಾರ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 12 ಮಂದಿ ಸಾವನ್ನಪ್ಪಿದ್ದು ಇತರ 20 ಮಂದಿ ಗಾಯಗೊಂಡಿರುವುದಾಗಿ ಸರ್ಕಾರಿ ಸ್ವಾಮ್ಯದ ಪಿಟಿವಿ ವರದಿ ಮಾಡಿದೆ.
ಇಸ್ಲಾಮಾಬಾದ್ ನ ಜಿ-11 ಸೆಕ್ಟರ್ ನಲ್ಲಿರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಪ್ರವೇಶದ್ವಾರದ ಬಳಿ ಆತ್ಮಾಹುತಿ ದಾಳಿ ನಡೆದಿದ್ದು ಆತ್ಮಹತ್ಯಾ ಬಾಂಬರ್ ನ ರುಂಡವು ರಸ್ತೆಯಲ್ಲಿ ಬಿದ್ದಿತ್ತು. ಸ್ಫೋಟದ ತೀವ್ರತೆಗೆ ನ್ಯಾಯಾಲಯದ ಹೊರಗಡೆ ನಿಲ್ಲಿಸಿದ್ದ ಹಲವು ವಾಹನಗಳೂ ಹಾನಿಗೊಂಡಿದ್ದು ಯಾವುದೇ ಗುಂಪು ಸ್ಫೋಟದ ಹೊಣೆ ವಹಿಸಿಕೊಂಡಿಲ್ಲ. ಆದರೆ ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್(ಟಿಟಿಪಿ) ಸ್ಫೋಟ ನಡೆಸಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
Next Story





