ಸುನೀತಾ ವಿಲಿಯಮ್ಸ್ ಮಾರ್ಚ್ ಮಧ್ಯಭಾಗದಲ್ಲಿ ಭೂಮಿಗೆ ಮರಳುವ ಸಾಧ್ಯತೆ

Photo Credit | X/@Astro_Suni
ವಾಷಿಂಗ್ಟನ್: ಕಳೆದ ವರ್ಷದ ಜೂನ್ ನಿಂದ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಕ್ಕಿಬಿದ್ದಿರುವ ಅಮೆರಿಕದ ಇಬ್ಬರು ಗಗನಯಾತ್ರಿಗಳು ನಿರೀಕ್ಷೆಗಿಂತಲೂ ಮೊದಲೇ ಭೂಮಿಗೆ ವಾಪಸಾಗುವ ಸಾಧ್ಯತೆಯಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಮಂಗಳವಾರ ಹೇಳಿದೆ.
ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮಾರ್ಚ್ ಪ್ರಥಮ ವಾರ ಅಥವಾ ಎರಡನೇ ವಾರದಲ್ಲಿ ಭೂಮಿಗೆ ವಾಪಸಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
Next Story





