ತೈಲ ಸಾಗಿಸುತ್ತಿದ್ದ ಸೂಪರ್ ಟ್ಯಾಂಕರ್ ಹಾರ್ಮುಝ್ ಜಲಸಂಧಿಯಲ್ಲಿ ಸ್ಪೋಟ: IRGC ಮಾಹಿತಿ

ಸಾಂದರ್ಭಿಕ ಚಿತ್ರ
ಟೆಹರಾನ್: 20 ಲಕ್ಷಕ್ಕೂ ಹೆಚ್ಚು ಬ್ಯಾರೆಲ್ ಕಚ್ಚಾ ತೈಲವನ್ನು ಹೊತ್ತೊಯ್ಯುತ್ತಿದ್ದ ಸೂಪರ್ ಟ್ಯಾಂಕರ್ ಒಂದು ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗುವಾಗ ಸಮುದ್ರದಡಿಯ ಸ್ಫೋಟಕಕ್ಕೆ ಢಿಕ್ಕಿಯಾಗಿ ಸ್ಪೋಟಗೊಂಡು ಬೆಂಕಿಗೆ ಆಹುತಿಯಾಗಿದೆ ಎಂದು ಇರಾನ್ನ ರೆವಲ್ಯೂಷನರಿ ಗಾಡ್ರ್ಸ್ (ಐಆರ್ಜಿಸಿ) ಶನಿವಾರ ತಿಳಿಸಿದೆ.
ಆ ಹಡಗು ಇರಾನ್ನಿಂದ ಅನುಮೋದಿಸಲ್ಪಡದ ಮಾರ್ಗವನ್ನು ಬಳಸಿಕೊಂಡು ಈ ಆಯಕಟ್ಟಿನ ಜಲಮಾರ್ಗವನ್ನು ಅಕ್ರಮವಾಗಿ ದಾಟಲು ಯತ್ನಿಸುತ್ತಿತ್ತು. ಇರಾನ್ನ ಕರಾವಳಿ ಪ್ರಾಧಿಕಾರವನ್ನು ವಂಚಿಸುವ ಪ್ರಯತ್ನದಲ್ಲಿ ಟ್ಯಾಂಕರ್ ಉದ್ದೇಶಪೂರ್ವಕವಾಗಿ ತನ್ನ ಸ್ಥಾನಿಕ ಮತ್ತು ರಾಡಾರ್ ವ್ಯವಸ್ಥೆಗಳನ್ನು ಸ್ಥಗಿತಗೊಳಿಸಿತ್ತು ಎಂದು ಇರಾನ್ನ ಸರಕಾರಿ ಸ್ವಾಮ್ಯದ ಪ್ರೆಸ್ ಟಿವಿ ವರದಿ ಮಾಡಿದೆ.
Next Story




