ಮೆಕ್ಸಿಕೊ | ಸೂಪರ್ ಮಾರ್ಕೆಟ್ನಲ್ಲಿ ಸ್ಪೋಟ : ಕನಿಷ್ಠ 23 ಮಂದಿ ಮೃತ್ಯು

Photo | deccanchronicle
ಮೆಕ್ಸಿಕೊ: ಉತ್ತರ ಮೆಕ್ಸಿಕೊದಲ್ಲಿನ ಸೂಪರ್ ಮಾರ್ಕೆಟ್ವೊಂದರಲ್ಲಿ ಶನಿವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 23 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸ್ಪೋಟವು ನಗರದ ಕೇಂದ್ರ ಭಾಗದಲ್ಲಿನ ʼವಾಲ್ಡೊಸ್ ಸ್ಟೋರ್ʼ ನಲ್ಲಿ ಸಂಭವಿಸಿದೆ.
ಈ ಕುರಿತು ವಿಡಿಯೊ ಸಂದೇಶವೊಂದನ್ನು ಹಂಚಿಕೊಂಡಿರುವ ಸೊನೊರಾ ರಾಜ್ಯದ ರಾಜ್ಯಪಾಲ ಅಲ್ಫೋನ್ಸೊ ಡುರಾಝೊ, “ಈ ದುರಂತದಲ್ಲಿ ಮೃತಪಟ್ಟಿರುವವರು ಬಹುತೇಕರು ಅಪ್ರಾಪ್ತರಾಗಿರುವುದು ದುಃಖಕರ ಸಂಗತಿ. ಗಾಯಾಳುಗಳನ್ನು ಹೆರ್ಮಸಿಲ್ಲೊ ನಗರದಲ್ಲಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
“ನಾನು ಈ ಘಟನೆಗೆ ಕಾರಣವೇನು ಹಾಗೂ ಈ ಘಟನೆಗೆ ಕಾರಣರಾದವರು ಯಾರು ಎಂಬುದನ್ನು ಪತ್ತೆ ಹಚ್ಚಲು ವಿಸ್ತೃತ ಮತ್ತು ಪಾರದರ್ಶಕ ತನಿಖೆಗೆ ಆದೇಶಿಸಿದ್ದೇನೆ” ಎಂದು ಅಲ್ಫೋನ್ಸೊ ಡುರಾಝೊ ಹೇಳಿದ್ದಾರೆ.
Next Story





