ಡ್ರೋನ್ ದಾಳಿಯ ಬಳಿಕ ಕಾಣೆಯಾಗಿರುವ ನಾವಿಕನ ಪತ್ತೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ

ಹೊಸದಿಲ್ಲಿ: ಜುಲೈ 25ರಂದು ಕಪ್ಪು ಸಮುದ್ರದಲ್ಲಿ ಡ್ರೋನ್ ದಾಳಿಗೆ ತುತ್ತಾಗಿದ್ದ ಸರಕು ಸಾಗಣೆ ನೌಕೆಯಲ್ಲಿದ್ದು,ಬಳಿಕ ನಾಪತ್ತೆಯಾಗಿರುವ ಭಾರತೀಯ ನಾವಿಕನನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಪತ್ತೆ ಹಚ್ಚುವಂತೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ (ಎಂಇಎ) ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್,ನ್ಯಾಯಮೂರ್ತಿಗಳಾದ ಜಾಯಮಾಲ್ಯ ಬಾಗ್ಚಿ ಮತ್ತು ವಿ.ಮೋಹನಾ ಅವರ ಪೀಠವು, ‘ಎಂವಿ ಎಜಿಎನ್ ರಾಗ್ನರ್’ ಸರಕು ಸಾಗಣೆ ನೌಕೆಯಲ್ಲಿದ್ದ ದೀಪಕ್ ಕುಮಾರ್ ಗುಪ್ತಾ ಅವರ ಸುಳಿವನ್ನು ತಿಳಿಯಲು ಉಕ್ರೇನ್ ಮತ್ತು ರೊಮೇನಿಯಾದ ಬುಕಾರೆಸ್ಟ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಿಂದ ತಕ್ಷಣ ಮಾಹಿತಿ ಪಡೆಯುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿತು.
ಈ ಕುರಿತು ಮುಂದಿನ ವಿಚಾರಣೆಯು ಶುಕ್ರವಾರ,ಆಗಸ್ಟ್ 7ರಂದು ನಡೆಯಲಿದೆ.
Next Story




