ಸ್ವೀಡನ್ ಶಾಲೆಯಲ್ಲಿ ಶೂಟೌಟ್: ಕನಿಷ್ಠ 11 ಮಂದಿ ಮೃತ್ಯು

ಸಾಂದರ್ಭಿಕ ಚಿತ್ರ
ಸ್ಟಾಕ್ಹೋಮ್: ಸ್ವೀಡನ್ ನ ಒರೆಬ್ರೋ ನಗರದ ಶಾಲೆಯೊಂದರಲ್ಲಿ ಮಂಗಳವಾರ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ರಾಜಧಾನಿ ಸ್ಟಾಕ್ಹೋಮ್ ನ ಸುಮಾರು 200 ಕಿ.ಮೀ ಪಶ್ಚಿಮದಲ್ಲಿರುವ ಒರೆಬ್ರೋ ನಗರದ ರಿಸ್ಬರ್ಗ್ಸ್ಕಾ ಹೈಸ್ಕೂಲ್ನ ಕ್ಯಾಂಪಸ್ನಲ್ಲಿ ಮಂಗಳವಾರ ಸಂಜೆ ಗುಂಡಿನ ದಾಳಿ ನಡೆದಿದೆ. ಶಾಲೆಯಲ್ಲಿ ಪರೀಕ್ಷೆ ಬರೆದು ಹೆಚ್ಚಿನ ವಿದ್ಯಾರ್ಥಿಗಳು ಮನೆಗೆ ತೆರಳಿದ್ದರು. ಕಟ್ಟಡದ ಆವರಣದಲ್ಲಿ ಮಕ್ಕಳ ಶಾಲೆ, ವಯಸ್ಕರ ಶಿಕ್ಷಣ ಶಾಲೆ ಸಹಿತ ಹಲವು ಶಾಲೆಗಳಿದ್ದು ಮೃತಪಟ್ಟವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಒದಗಿಸಿಲ್ಲ.
ಗುಂಡಿನ ದಾಳಿಯ ಮಾಹಿತಿ ತಿಳಿದೊಡನೆ ಪೊಲೀಸರು ಮತ್ತು ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು 11 ಮಂದಿ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಮೃತರಲ್ಲಿ ಶಂಕಿತ ಆರೋಪಿಯೂ ಸೇರಿದ್ದಾನೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
Next Story