ಸ್ವೀಡನ್ ಶಾಲೆಯಲ್ಲಿ ಶೂಟೌಟ್: 5 ಮಂದಿಗೆ ಗಾಯ

ಸಾಂದರ್ಭಿಕ ಚಿತ್ರ
ಸ್ಟಾಕ್ಹೋಮ್: ಸ್ವೀಡನ್ನ ಒರೆಬ್ರೋ ನಗರದ ಶಾಲೆಯೊಂದರಲ್ಲಿ ಮಂಗಳವಾರ ನಡೆದ ಗುಂಡಿನ ದಾಳಿಯಲ್ಲಿ ಐದು ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಗುಂಡಿನ ದಾಳಿ ನಡೆದ ಕಟ್ಟಡದ ಆವರಣದಲ್ಲಿ ಮಕ್ಕಳ ಶಾಲೆ, ವಯಸ್ಕರ ಶಿಕ್ಷಣ ಶಾಲೆ ಸಹಿತ ಹಲವು ಶಾಲೆಗಳಿವೆ. ಗುಂಡಿನ ದಾಳಿ ನಡೆದ ತಕ್ಷಣ ಚಿಕ್ಕ ಮಕ್ಕಳನ್ನು ಸುರಕ್ಷಿತವಾಗಿ ಶಾಲೆಯೊಳಗೆ ಕಳುಹಿಸಲಾಗಿದೆ. ಗಾಯಗೊಂಡವರ ಅಥವಾ ದಾಳಿ ನಡೆಸಿದವರ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಸ್ಥಳಕ್ಕೆ ಪೊಲೀಸರು , ರಕ್ಷಣಾ ತಂಡವನ್ನು ರವಾನಿಸಲಾಗಿದೆ ಎಂದು ಸರಕಾರದ ಮೂಲಗಳು ಹೇಳಿವೆ.
Next Story