ಮೊಸ್ಸಾದ್ಗಾಗಿ ಗೂಢಚರ್ಯೆ ಆರೋಪ: ಇರಾನ್ನಲ್ಲಿ ಸ್ವೀಡನ್ ಪ್ರಜೆಗೆ ಗಲ್ಲು

ಕುರೋಶ್ ಕೆವ್ಯಾನಿ | Photo Credit : X
ಟೆಹರಾನ್,ಮಾ.18: ಇಸ್ರೇಲ್ನ ಬೇಹುಗಾರಿಕಾ ಸಂಸ್ಥೆ ಮೊಸ್ಸಾದ್ಗಾಗಿ ಗೂಢಚರ್ಯೆ ನಡೆಸುತ್ತಿದ್ದ ಆರೋಪ ಎದುರಿಸುತ್ತಿದ್ದ ಸ್ವೀಡನ್ ಪ್ರಜೆ ಕುರೋಶ್ ಕೆವ್ಯಾನಿಯನ್ನು ಇರಾನ್ ಗಲ್ಲಿಗೇರಿಸಿದೆ. ಇರಾನ್ನ ಸೂಕ್ಷ್ಮ ಸಂವೇದಿ ಪ್ರದೇಶಗಳ ಛಾಯಾಚಿತ್ರಗಳನ್ನು ಮೊಸ್ಸಾದ್ ಜೊತೆ ಹಂಚಿಕೊಂಡ ಆರೋಪದಲ್ಲಿ ಕುರೋಶ್ನನ್ನು ದೋಷಿಯೆಂದು ಪರಿಗಣಿಸಲಾಗಿತ್ತು ಎಂದು ಇರಾನ್ನ ನ್ಯಾಯಾಂಗ ಇಲಾಖೆಯ ಆನ್ಲೈನ್ ಜಾಲತಾಣ ಮಿಝಾನ್ ಸುದ್ದಿಸಂಸ್ಥೆ ಬುಧವಾರ ವರದಿ ಮಾಡಿದೆ.
2025ರಲ್ಲಿ ಇರಾನ್ ಮೇಲೆ ಇಸ್ರೇಲ್-ಅಮೆರಿಕ ಜಂಟಿ ದಾಳಿ ನಡೆಸಿದ ಬಳಿಕ ಇರಾನ್ನಲ್ಲಿ ಮರಣದಂಡನೆಗಳು ಅಧಿಕಗೊಂಡಿವೆಯೆಂದು ಮಾನವಹಕ್ಕುಗಳ ಸಂಘಟನೆ ಎಚ್ಆರ್ಎಎನ್ಎ ವರದಿ ಮಾಡಿದೆ.
Next Story





