ಸ್ವೀಡನ್ ಪ್ರೌಢಶಾಲೆಯಲ್ಲಿ ಖಡ್ಗದಿಂದ ದಾಳಿ: ಓರ್ವ ಮೃತ್ಯು

Photo Credit : AP
ಸ್ಟಾಕ್ಹೋಂ: ಶುಕ್ರವಾರ ಮಧ್ಯ ಸ್ವೀಡನ್ನ ಪ್ರೌಢಶಾಲೆಯೊಂದಕ್ಕೆ ಖಡ್ಗ ಹಿಡಿದು ಬಂದ ದಾಳಿಕೋರನೊಬ್ಬ ಒಬ್ಬನನ್ನು ಹತ್ಯೆಗೈದು, ಮೂವರನ್ನು ಗಂಭೀರ ಗಾಯಗೊಳಿಸಿದ್ದಾನೆ. ನಂತರ ಪೊಲೀಸರು 18 ವರ್ಷದ ಶಂಕಿತನಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಿರುವುದಾಗಿ ವರದಿಯಾಗಿದೆ.
ಫಾಗರ್ಸ್ಟಾದಲ್ಲಿರುವ ಬ್ರಿನೆಲ್ಸ್ಕೋಲನ್ ಶಾಲೆಯಲ್ಲಿ ಈ ದಾಳಿ ನಡೆದಿದೆ . ಗಾಯಗೊಂಡವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ದಾಳಿಯ ಹಿಂದಿನ ಉದ್ದೇಶವನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story




