ತೈವಾನ್ ವಿಷಯದಲ್ಲಿ ಜಾಗರೂಕರಾಗಿರಿ: ಅಮೆರಿಕಾಕ್ಕೆ ಚೀನಾದ ಎಚ್ಚರಿಕೆ

Photo Credit : NDTV
ಬೀಜಿಂಗ್, ಅ.31: ತೈವಾನ್ ವಿಷಯಕ್ಕೆ ಸಂಬಂಧಿಸಿ ತನ್ನ ಮಾತುಗಳು ಹಾಗೂ ಕಾರ್ಯಗಳಲ್ಲಿ ಅಮೆರಿಕಾ ಎಚ್ಚರಿಕೆ ವಹಿಸಬೇಕು ಮತ್ತು ತೈವಾನ್ ನ ಸ್ವಾತಂತ್ರ್ಯವನ್ನು ವಿರೋಧಿಸಬೇಕು ಎಂದು ಚೀನಾದ ರಕ್ಷಣಾ ಸಚಿವ ಡಾಂಗ್ ಜುನ್ ಶುಕ್ರವಾರ ಹೇಳಿದ್ದಾರೆ.
ಚೀನಾ ತನ್ನ ರಾಷ್ಟ್ರೀಯ ಭದ್ರತಾ ಹಿತಾಸಕ್ತಿಗಳನ್ನು ದೃಢವಾಗಿ ಕಾಪಾಡಿಕೊಂಡು ಶಾಂತಿಯುತ ಅಭಿವೃದ್ಧಿಗೆ ಬದ್ಧವಾಗಿದೆ. ಚೀನಾ ಮತ್ತು ಅಮೆರಿಕಾ ತಮ್ಮ ರಕ್ಷಣಾ ಇಲಾಖೆಗಳ ನಡುವೆ ನೀತಿ-ಮಟ್ಟದ ಮತ್ತು ಮಿಲಿಟರಿ ಅಧಿಕಾರಿಗಳ ನಡುವಿನ
ಸಂವಹನವನ್ನು ಹೆಚ್ಚಿಸಬೇಕು ಎಂದು ಚೀನಾದ ರಕ್ಷಣಾ ಸಚಿವರನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. ಈ ಮಧ್ಯೆ, ಮಲೇಶ್ಯಾದಲ್ಲಿ ನಡೆಯುತ್ತಿರುವ ಆಸಿಯಾನ್ ರಕ್ಷಣಾ ಸಚಿವರ ಶೃಂಗಸಭೆಯ ನೇಪಥ್ಯದಲ್ಲಿ ಡಾಂಗ್ ಜುನ್ ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆಥ್ ರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದಾಗಿ ವರದಿಯಾಗಿದೆ.
Next Story





