ಲಂಡನ್ ನಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಕಾರ್ಯಕ್ರಮ ರದ್ದು; ಕಾರಣವೇನು?

CNBC TV18
ಲಂಡನ್: ಲಂಡನ್ ನಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಕಾರ್ಯಕ್ರಮವು ಸುರಕ್ಷತಾ ಕಳವಳಗಳ ಹಿನ್ನೆಲೆ ರದ್ದುಗೊಂಡಿದೆ.
ವಿಜಯ್ ಅವರನ್ನು ನೋಡಲು ಸಹಸ್ರಾರು ಅಭಿಮಾನಿಗಳು ಲಂಡನ್ ನ ಅತಿ ಎತ್ತರದ ಕಟ್ಟಡವಾದ ಶಾರ್ಡ್ ಬಳಿ ಮಂಗಳವಾರ ನೆರೆದಿದ್ದರು. ಆದರೆ, ಸುರಕ್ಷತಾ ಕಳವಳಗಳನ್ನು ಮುಂದಿಟ್ಟು ಲಂಡನ್ ಮೆಟ್ರೊಪಾಲಿಟನ್ ಪೊಲೀಸರು ವಿಜಯ್ ಅವರ ಕಾರ್ಯಕ್ರಮವನ್ನು ರದ್ದಗೊಳಿಸಿದ್ದಾರೆ ಎಂದು ವರದಿಯಾಗಿದೆ.
“ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ನಾವು ಕಾರ್ಯಕ್ರಮವನ್ನು ರದ್ದುಗೊಳಿಸುತ್ತಿದ್ದೇವೆ. ಸುರಕ್ಷತಾ ಕಾರಣಗಳಿಂದಾಗಿ ಕಾರ್ಯಕ್ರಮ ನಡೆಸಲು ನಮಗೆ ಅನುಮತಿ ದೊರೆತಿಲ್ಲ” ಎಂದು ವಿಜಯ್ ಅವರ ತಂಡದ ಸದಸ್ಯರೊಬ್ಬರು ಧ್ವನಿವರ್ಧಕದ ಮೂಲಕ ಘೋಷಿಸಿದ್ದಾರೆ.
ಕಾರ್ಯಕ್ರಮ ರದ್ದಾದ ಹಿನ್ನೆಲೆ ಗಂಟೆಗಟ್ಟಲೆ ಸರದಿಯಲ್ಲಿ ಕಾಯುತ್ತಿದ್ದ ವಿಜಯ್ ಅವರ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.
"ಇದು ಸಮಂಜಸವಾದ ನಿರ್ಧಾರ ಎಂದು ನನಗನಿಸುತ್ತದೆ. ಆದರೆ, ಇಲ್ಲಿ ಜನರು ಗಂಟೆಗಟ್ಟಲೆ ಕಾಯುತ್ತಿದ್ದಾರೆ. ತಮಿಳುನಾಡಿನಲ್ಲಿ ನಾವು ನೋಡುವ ಜನಸಂದಣಿಗೆ ಹೋಲಿಸಿದರೆ ಇದು ಅಷ್ಟೇನೂ ದೊಡ್ಡ ಜನಸಮೂಹವಲ್ಲ” ಎಂದುವಿಜಯ್ ಗಾಗಿ ಕಾದು ಕುಳಿತಿದ್ದ ಯುವ ಅಭಿಮಾನಿಯೊಬ್ಬರು ನಿರಾಸೆಯಿಂದ ಹೇಳಿದರು.
ತಮಿಳುನಾಡಿಗೆ ಹೂಡಿಕೆಗಳನ್ನು ಆಕರ್ಷಿಸುವ ಉದ್ದೇಶದಿಂದ ವಿಜಯ್ ಅವರ ನೇತೃತ್ವದ ನಿಯೋಗ ಬ್ರಿಟನ್ಗೆ ತೆರಳಿದೆ. 12,300 ಕೋಟಿ ಮೌಲ್ಯದ ಹೂಡಿಕೆಗಳನ್ನು ಒಳಗೊಂಡ ಹಲವು ತಿಳಿವಳಿಕೆ ಒಪ್ಪಂದಗಳಿಗೆ ನಿಯೋಗ ಸಹಿ ಹಾಕಿದೆ ಎಂದು ಮುಖ್ಯಮಂತ್ರಿ ಕಚೇರಿ ಈ ಹಿಂದೆ ತಿಳಿಸಿತ್ತು.






