ಹಾರ್ಮುಝ್ ಜಲಸಂಧಿಯಲ್ಲಿ ಟ್ಯಾಂಕರ್ ಮೇಲೆ ದಾಳಿ; ಹಡಗಿಗೆ ಹಾನಿ

ಸಾಂದರ್ಭಿಕ ಚಿತ್ರ | PTI
ಹೊಸದಿಲ್ಲಿ: ಹಾರ್ಮುಝ್ ಜಲಸಂಧಿಯ ಮೂಲಕ ಹೊರಹೋಗುತ್ತಿದ್ದ ಟ್ಯಾಂಕರ್ ಮೇಲೆ ಗುರುತಿಸಲಾಗದ ಕ್ಷಿಪಣಿ ಅಥವಾ ವಸ್ತುವೊಂದು ಅಪ್ಪಳಿಸಿದ್ದು, ಹಡಗಿಗೆ ಹಾನಿಯಾಗಿದೆ ಎಂದು ಯುನೈಟೆಡ್ ಕಿಂಗ್ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ (UKMTO) ಕೇಂದ್ರವನ್ನು ಉಲ್ಲೇಖಿಸಿ Aljazeera.com ಮಾಡಿದೆ
ಟ್ಯಾಂಕರ್ ನ ಎಡಭಾಗಕ್ಕೆ (ಪೋರ್ಟ್ ಸೈಡ್) ವಸ್ತುವೊಂದು ಅಪ್ಪಳಿಸಿದೆ. ದಾಳಿಯಿಂದ ಹಡಗಿಗೆ ಹಾನಿಯಾಗಿದ್ದರೂ, ಅದರಲ್ಲಿದ್ದ ಸಿಬ್ಬಂದಿಯೆಲ್ಲರೂ ಸುರಕ್ಷಿತವಾಗಿದ್ದಾರೆ. ಯಾವುದೇ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ ಎಂದು UKMTO ತಿಳಿಸಿದೆ.
ಹಾರ್ಮುಝ್ ಜಲಸಂಧಿಯು ಜಾಗತಿಕ ತೈಲ ಸಾಗಣೆಯ ಪ್ರಮುಖ ಸಮುದ್ರ ಮಾರ್ಗವಾಗಿದೆ. ಈ ಪ್ರದೇಶದಲ್ಲಿ ನಡೆಯುವ ಭದ್ರತಾ ಘಟನೆಗಳು ಅಂತರರಾಷ್ಟ್ರೀಯ ಹಡಗು ಸಂಚಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಟ್ಯಾಂಕರ್ ಮೇಲಿನ ದಾಳಿಗೆ ಯಾರು ಹೊಣೆ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ದಾಳಿಗೆ ಬಳಸಲಾದ ವಸ್ತುವಿನ ಸ್ವರೂಪ ಹಾಗೂ ಹಡಗಿಗೆ ಉಂಟಾಗಿರುವ ಹಾನಿಯ ಪ್ರಮಾಣದ ಬಗ್ಗೆಯೂ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.




