Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. “ನಿಮ್ಮ ಕೈಗಳಲ್ಲಿ ರಕ್ತವಿದೆ”: ಮೆಟಾ...

“ನಿಮ್ಮ ಕೈಗಳಲ್ಲಿ ರಕ್ತವಿದೆ”: ಮೆಟಾ ಸಿಇಒ ಮಾರ್ಕ್‌ ಝುಕರ್ ಬರ್ಗ್‌ ವಿರುದ್ಧ ಸೆನೆಟರ್‌ ಲಿಂಡ್ಸೆ ಗ್ರಹಾಂ ಆಕ್ರೋಶ

ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಅಮೆರಿಕ ಸೆನೆಟರ್‌ಗಳಿಂದ ತರಾಟೆ

ವಾರ್ತಾಭಾರತಿವಾರ್ತಾಭಾರತಿ6 Feb 2024 10:35 AM IST
share
“ನಿಮ್ಮ ಕೈಗಳಲ್ಲಿ ರಕ್ತವಿದೆ”: ಮೆಟಾ ಸಿಇಒ ಮಾರ್ಕ್‌ ಝುಕರ್ ಬರ್ಗ್‌ ವಿರುದ್ಧ ಸೆನೆಟರ್‌ ಲಿಂಡ್ಸೆ ಗ್ರಹಾಂ ಆಕ್ರೋಶ

ವಾಷಿಂಗ್ಟನ್: ಆನ್‌ಲೈನ್‌ನಲ್ಲಿ ಮಕ್ಕಳನ್ನು ಸೂಕ್ತವಾಗಿ ರಕ್ಷಿಸಲು ವಿಫಲರಾಗಿದ್ದಾರೆಂಬ ಆರೋಪ ಎದುರಿಸುತ್ತಿರುವ ಮೆಟಾ ಸಿಇಒ ಮಾರ್ಕ್‌ ಝುಕರ್ ಬರ್ಗ್‌ ಸಹಿತ ಇತರ ಸಾಮಾಜಿಕ ಜಾಲತಾಣ ಸಂಸ್ಥೆಗಳ ಮುಖಂಡರು ಬುಧವಾರ ಕಾಂಗ್ರೆಶನಲ್‌ ವಿಚಾರಣೆ ವೇಳೆ ಅಮೆರಿಕ ಸಂಸದರಿಂದ ತೀವ್ರ ತರಾಟೆಗೊಳಗಾಗದರು.

ಫೇಸ್ ಬುಕ್‌, ಇನ್‌ಸ್ಟಾಗ್ರಾಂ ಮತ್ತು ಡಿಸ್ಕಾರ್ಡ್‌ನಲ್ಲಿ ಲೈಂಗಿಕ ಶೋಷಣೆಗೊಳಗಾದವರ ಕಳವಳಕಾರಿ ವೀಡಿಯೋಗಳ ಪ್ರದರ್ಶನದೊಂದಿಗೆ ವಿಚಾರಣೆಯನ್ನು ಸೆನೆಟ್‌ ನ್ಯಾಯಾಂಗ ಸಮಿತಿ ಆರಂಭಿಸಿತು.

“ನಿಮ್ಮ ಕೈಗಳಲ್ಲಿ ರಕ್ತವಿದೆ,” ಎಂದು ಸೆನೆಟರ್‌ ಲಿಂಡ್ಸೆ ಗ್ರಹಾಂ ಅವರು ಝುಕರ್ ಬರ್ಗ್‌ ಅವರಿಗೆ ಹೇಳಿದರು ಹಾಗೂ ಮೆಟಾ ಉತ್ಪನ್ನಗಳು “ಜನರನ್ನು ಕೊಲ್ಲುತ್ತಿವೆ,” ಎಂದು ದೂರಿದರು.

ಸಮಿತಿ ಅಧ್ಯಕ್ಷ, ಇಲ್ಲಿನಿಯೋಸ್‌ನ ಸೆನೆಟರ್‌ ಡಿಕ್‌ ಡರ್ಬಿನ್‌ ಅವರು ಸಾಮಾಜಿಕ ಜಾಲತಾಣ ಸಂಶ್ಥೆಗಳನ್ನು ಟೀಕಿಸಿದರಲ್ಲದೆ. ಡಿಸ್ಕಾರ್ಡ್‌ ಮೂಲಕ ಮಕ್ಕಳನ್ನು ಶೋಷಿಸಲು ಅವರ ಸ್ನೇಹ ಸಂಪಾದಿಸುವುದು, ಮೆಟಾ ಇನ್‌ಸ್ಟಾಗ್ರಾಂನಲ್ಲಿ ಬಾಲಕಾಮಿಗಳ ಜಾಲಕ್ಕೆ ಅನುವು ಮಾಡಿಕೊಟ್ಟಿರುವುದು ಹಾಗೂ ಸ್ನ್ಯಾಪ್‌ಚಾಟ್‌ನ ಡಿಸಪೀಯರಿಂಗ್‌ ಮೆಸೇಜ್‌ಗಳನ್ನು ಹಣಕ್ಕೆ ಬೇಡಿಕೆಯಿರಿಸಲು ಲೈಂಗಿಕ ವಿಚಾರಗಳನ್ನು ಬಳಸಿಕೊಳ್ಳುತ್ತಿರುವ ನಿದರ್ಶನ ನೀಡಿದರು.

ಡಿಸ್ಕಾರ್ಡ್‌ನ ಸಿಇಒ ಜೇಸನ್‌ ಸಿಟ್ರೊನ್‌ ತಮ್ಮ ಸಂಸ್ಥೆ ಮಕ್ಕಳ ಸುರಕ್ಷತೆಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು ಹಾಗೂ ಇದನ್ನು ಇನ್ನಷ್ಟು ಹೆಚ್ಚಿಸುವ ಭರವಸೆ ನೀಡಿದರು. 2023ರಲ್ಲಿ ಮಕ್ಕಳ ಸುರಕ್ಷತೆಗಾಗಿ 5 ಬಿಲಿಯನ್‌ ಡಾಲರ್‌ ವೆಚ್ಚ ಮಾಡಿರುವುದಾಗಿ ಮೆಟಾ ಹೇಳಿದರೆ, ಈ ಸಮಸ್ಯೆ ಪರಿಹಾರಕ್ಕೆ 2024ರಲ್ಲಿ 2 ಬಿಲಿಯನ್‌ ಡಾಲರ್‌ ಮೀಸಲಿಡುವುದಾಗಿ ಟಿಕ್‌ ಟಾಕ್‌ ಹೇಳಿದೆ.

ಫೇಸ್ಬುಕ್‌ ಮತ್ತು ಹದಿಹರೆಯದವರ ಮಾನಸಿಕ ಸಮಸ್ಯೆಗಳ ನಡುವೆ ನೇರ ನಂಟನ್ನು ಝುಕರ್ ಬರ್ಗ್‌ ನಿರಾಕರಿಸಿದರಲ್ಲದೆ ಇಂತಹ ನಂಟಿನ ಬಗ್ಗೆ ವೈಜ್ಞಾನಿಕ ಪುರಾವೆಗಳಿಲ್ಲ ಎಂದರು. ಹೆಚ್ಚಿನ ಪ್ರಕರಣಗಳಲ್ಲಿ ಈ ನಂಟು ಇಲ್ಲ ಆದರೆ ಕೆಲವೊಂದು ನಿದರ್ಶನಗಳಲ್ಲಿ ಇರಬಹುದು ಎಂದು ನಂತರ ಅವರು ಒಇಪ್ಪಿಕೊಂಡರು.

ಟಿಕ್‌ಟಾಕ್‌ನಲ್ಲಿ 13 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳಿಗೆ ಇರುವ ನಿಷೇಧವನ್ನು ಸಂಸ್ಥೆಯ ಸಿಇಒ ಶೌ ಝಿ ಚ್ಯು ಪುನುರುಚ್ಚರಿಸಿದರು.

ಸ್ನ್ಯಾಪ್‌ ಸಿಇಒ ಇವಾನ್‌ ಸ್ಪೀಗೆಲ್‌ ಅವರು ತಮ್ಮ ಪ್ಲ್ಯಾಟ್‌ಫಾರ್ಮ್‌ ಮೂಲಕ ಫೆಂಟನೈಲ್‌ ಖರೀದಿಸಿ ಅವುಗಳ ಓವರ್‌ಡೋಸ್‌ನಿಂದ ಸಮಸ್ಯೆ ಎದುರಿಸಿದ ಮಕ್ಕಳ ಹೆತ್ತವರಲ್ಲಿ ಕ್ಷಮೆ ಕೋರಿದರು.

ಅಪ್ರಾಪ್ತರಿಗೆ ಹಾನಿಕಾರಕ ವಿಷಯಗಳನ್ನು ಶಿಫಾರಸು ಮಾಡಿದಲ್ಲಿ ಆಪ್‌ಗಳು ಮತ್ತು ಸಾಮಾಜಿಕ ಜಾಲತಾಣಗಳ ಕಾನೂನು ಕ್ರಮ ಎದುರಿಸುವ ಪ್ರಸ್ತಾವಿತ ಮಸೂದೆಗೆ ಸ್ಪೀಗೆಲ್‌ ಬೆಂಬಲ ವ್ಯಕ್ತಪಡಿಸಿದರು.

ಕೆಲ ರಿಪಬ್ಲಿಕನ್‌ ಸೆನೆರ್‌ಗಳು ಟಿಕ್‌ಟಾಕ್‌ ಚೀನಾ ಪರವಾಗಿದೆ ಎಂದು ಆರೋಪ ಹೊರಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X