ಟೆಕ್ಸಾಸ್: ಗೂಡ್ಸ್ ರೈಲಿನ ಬೋಗಿಯಲ್ಲಿ 6 ಮೃತದೇಹ ಪತ್ತೆ

Photo Credit : X
ನ್ಯೂಯಾರ್ಕ್, ಮೇ 11: ಅಮೆರಿಕದ ಟೆಕ್ಸಾಸ್ ರಾಜ್ಯದ, ಮೆಕ್ಸಿಕೋ ಗಡಿಭಾಗದ ಸನಿಹದಲ್ಲಿರುವ ಲಾರೆಡೊ ನಗರದಲ್ಲಿ ಸರಕು ಸಾಗಣೆ ರೈಲಿನ ಬೋಗಿಯಲ್ಲಿ ರವಿವಾರ 6 ಮಂದಿಯ ಮೃತದೇಹ ಪತ್ತೆಯಾಗಿರುವುದಾಗಿ ಪೊಲೀಸರು ಹೇಳಿದ್ದಾರೆ. ಅಮೆರಿಕ-ಮೆಕ್ಸಿಕೋ ಗಡಿಯಾದ್ಯಂತ ಕಾರ್ಯನಿರ್ವಹಿಸುವ ಯೂನಿಯನ್ ಪೆಸಿಫಿಕ್ ರೈಲ್ವೇಗೆ ಸೇರಿದ ಗೂಡ್ಸ್ ರೈಲಿನಲ್ಲಿ ಮೃತದೇಹ ಪತ್ತೆಯಾಗಿದ್ದು ಮೃತರ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ. ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
Next Story




