ಇರಾನ್ ಜನರು ನನ್ನನ್ನು ಸರ್ವೋಚ್ಚ ನಾಯಕನನ್ನಾಗಿ ಮಾಡಲು ಬಯಸಿದ್ದರು: ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ (Photo: PTI)
ವಾಶಿಂಗ್ಟನ್, ಮಾ.26: ಇರಾನ್ನ ಜನತೆ ತನ್ನನ್ನು ಅವರ ಸರ್ವೋಚ್ಛ ನಾಯಕನನ್ನಾಗಿ ಮಾಡಲು ಬಯಸಿದ್ದರು. ಆದರೆ ಆ ಹುದ್ದೆ ಪಡೆಯಲು ತನಗೆ ಆಸಕ್ತಿಯಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ವಾಶಿಂಗ್ಟನ್ನಲ್ಲಿ ರಿಪಬ್ಲಿಕನ್ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು `ಆಯತೊಲ್ಲಾ ಅಲಿ ಖಾಮಿನೈ ಅಮೆರಿಕ-ಇಸ್ರೇಲ್ ಮಿಲಿಟರಿ ಕಾರ್ಯಾಚರಣೆಯಲ್ಲಿ ಹತರಾದ ಬಳಿಕ ಇರಾನ್ನ ನಾಯಕತ್ವವು ತನ್ನನ್ನು ಮುಂದಿನ ಸರ್ವೋಚ್ಛ ನಾಯಕನನ್ನಾಗಿಸುವ ಪರಿಕಲ್ಪನೆಯನ್ನು ಮುಂದಿರಿಸಿತ್ತು. ` ಇಲ್ಲ. ಧನ್ಯವಾದಗಳು. ನನಗೆ ಅದು ಬೇಡ' ಎಂದು ನಿರಾಕರಿಸಿದ್ದೆ ಎಂದು ಹೇಳಿರುವುದಾಗಿ ವರದಿಯಾಗಿದೆ. ಈ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ತಮಾಷೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಓರ್ವ ಬಳಕೆದಾರರು ಟ್ರಂಪ್ ಅವರ ಫೋಟೋವನ್ನು `ಎಕ್ಸ್'ನಲ್ಲಿ ಪೋಸ್ಟ್ ಮಾಡಿ `ಅಯತೊಲ್ಲಾ ಡೊನಾಲ್ಡ್ ಜೆ.ಟ್ರಂಪ್' ಎಂದು ಕ್ಯಾಪ್ಷನ್ ನೀಡಿದ್ದಾರೆ.
Next Story





