ರೇಡಿಯೊ, ಜಿಪಿಎಸ್ ಸಾಧನ, ಪಿಸ್ತೂಲ್ನೊಂದಿಗೆ ಇರಾನ್ನ ಪರ್ವತದಲ್ಲಿ ಅಡಗಿದ್ದ ಅಮೆರಿಕದ ಪೈಲಟ್!

Photo Credit : facebook
ವಾಶಿಂಗ್ಟನ್, ಎ.5: ಅಮೆರಿಕದ ಮಿಲಿಟರಿ ರಕ್ಷಿಸಿದ ಪೈಲಟ್ ಶುಕ್ರವಾರ ವಿಮಾನದಿಂದ ಕೆಳಗೆ ಹಾರುವಾಗ ಗಾಯಗೊಂಡಿದ್ದ. ಆದರೂ ಕಷ್ಟಪಟ್ಟು ನಡೆಯುತ್ತಾ ಪರ್ವತ ಪ್ರದೇಶಗಳಲ್ಲಿ 36 ಗಂಟೆ ಅಡಗಿ ಕುಳಿತಿದ್ದ. ಈತನ ಬಳಿ ರಕ್ಷಣೆಗಾಗಿ ಒಂದು ಪಿಸ್ತೂಲ್ ಮಾತ್ರವಿತ್ತು ಎಂದು ವರದಿಯಾಗಿದೆ.
ಪೈಲಟ್ ಪಡೆದಿದ್ದ `ಬದುಕುಳಿಯುವುದು, ತಪ್ಪಿಸಿಕೊಳ್ಳುವುದು, ಪ್ರತಿರೋಧ ಮತ್ತು ಪಾರಾಗುವುದು' ತರಬೇತಿಯು ಆತನನ್ನು ಉಳಿಸಿದೆ. ಅಮೆರಿಕದ ವಾಯುಪಡೆ ಸಿಬ್ಬಂದಿಗಳಿಗೆ ರೇಡಿಯೊ/ಜಿಪಿಎಸ್ ಕೋಡ್ ಹೊಂದಿರುವ ಸಾಧನ, ಕನಿಷ್ಠ ಆಹಾರ ಮತ್ತು ನೀರು, ಪ್ರಥಮ ಚಿಕಿತ್ಸಾ ಸಾಧನಗಳನ್ನು ಹೊಂದಿರುವ ಜಾಕೆಟ್ ಒದಗಿಸಲಾಗುತ್ತದೆ.
ಇರಾನ್ ಹೊಡೆದುರುಳಿಸಿದ್ದ ಅಮೆರಿಕದ ಎಫ್-15 ಯುದ್ಧ ವಿಮಾನದಲ್ಲಿದ್ದ ಪೈಲಟ್ ನಾಪತ್ತೆಯಾಗಿದ್ದರು. ಅವರನ್ನು ರಕ್ಷಿಸುವ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ತಿಳಿಸಿದ್ದರು.
Next Story




