ವಿಶ್ವಸಂಸ್ಥೆಯ ಮುಂದಿನ ಮುಖ್ಯಸ್ಥರ ಆಯ್ಕೆ ಪ್ರಕ್ರಿಯೆ ಪ್ರಾರಂಭ

ವಿಶ್ವಸಂಸ್ಥೆ | Photo Credit : AP
ವಿಶ್ವಸಂಸ್ಥೆ, ಜು.30: ವಿಶ್ವಸಂಸ್ಥೆಯ ಮುಂದಿನ ಮಹಾನಿರ್ದೇಶಕರನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಪ್ರಾರಂಭಿಸಿದ್ದು, ಈ ಉನ್ನತ ಮಟ್ಟದ ಜಾಗತಿಕ ಮುಖಂಡರ ಹುದ್ದೆಗೆ ಸ್ಪರ್ಧಿಸುತ್ತಿರುವ ಏಳು ಅಭ್ಯರ್ಥಿಗಳ ಬೆಂಬಲವನ್ನು ಅಳೆಯಲು ಮೊದಲ `ಪ್ರಾಥಮಿಕ ಮತದಾನ' ನಡೆಸಿದೆ.
ಚಿಲಿಯ ಮಿಚೆಲ್ ಬ್ಯಾಚೆಲೆಟ್, ಈಕ್ವೆಡಾರ್ನ ಮಾರಿಯಾ ಫೆನಾರ್ಂಡಾ ಎಸ್ಪಿನ್ಸೊ, ಅರ್ಜೆಂಟೀನಾದ ರಫೆಲ್ ಗ್ರೊಸ್ಸಿ, ಕೋಸ್ಟರಿಕಾ ಮುಖಂಡ ರೆಬೆಕಾ ಗ್ರಿನ್ಸ್ಪಾನ್, ಉಗಾಂಡಾದ ಒಲಾರಾ ಒಟುನ್ನು, ಗಯಾನಾದ ಕ್ಯಾರೋಲಿನ್ ರೋಡ್ರಿಗಸ್-ಬರ್ಕೆಟ್ ಮತ್ತು ಸೆನೆಗಲ್ನ ಮ್ಯಾಕಿ ಸಾಲ್ ಸ್ಪರ್ಧಾ ಕಣದಲ್ಲಿದ್ದಾರೆ. ಹಾಲಿ ಮಹಾನಿರ್ದೇಶಕ ಆಂಟೋನಿಯೊ ಗುಟೆರಸ್ 2026ರ ಡಿಸೆಂಬರ್ 31ರಂದು ತಮ್ಮ ಎರಡನೇ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲಿದ್ದಾರೆ.
Next Story




