ಗ್ರೀಸ್ ನಲ್ಲಿ ಕಾಡ್ಗಿಚ್ಚಿನ ನಿಲ್ಲದ ಅಟ್ಟಹಾಸ; ನೂರಾರು ಗ್ರಾಮಗಳು, ಕಾಡುಗಳು ಬೆಂಕಿಯ ಕೆನ್ನಾಲಿಗೆಗೆ ಆಹುತಿ

ಸಾಂದರ್ಭಿಕ ಚಿತ್ರ
ಅಥೆನ್ಸ್: ಈಶಾನ್ಯ ಗ್ರೀಸ್ ನಲ್ಲಿ ಕಾಡ್ಗಿಚ್ಚಿನ ರುದ್ರತಾಂಡವವು ಗುರುವಾರ 13ನೇ ದಿನಕ್ಕೆ ಕಾಲಿಟ್ಟಿದ್ದು, ಕಾಡುಗಳನ್ನು, ಗ್ರಾಮಗಳು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗುತ್ತಿವೆ. ಇನ್ನೂ ಹಲವಾರು ಗ್ರಾಮಗಳು ಹಾಗೂ ಪಟ್ಟಣಗಳಿಗೆ ಕಾಡ್ಗಿಚ್ಚು ಹರಡುವ ಸಾಧ್ಯತೆ ದಟ್ಟವಾಗಿದ್ದು, ಸ್ಥಶಾಂತರಕ್ಕೆ ಸಜ್ಜಾಗಿರುವಂತೆ ಗ್ರೀಸ್ ನ ಆಡಳಿತಾಧಿಕಾರಿಗಳು ಸ್ಥಳೀಯ ನಿವಾಸಿಗಳಿಗೆ ಎಚ್ಚರಿಕೆಯ ಸಂದೇಶಗಳನ್ನು ನೀಡಿದ್ದಾರೆ.
ಈಶಾನ್ಯ ಗ್ರೀಸ್ ನ ವಿವಿಧೆಡೆ 100ಕ್ಕೂ ಅಧಿಕ ಹೆಚ್ಚುವರಿ ಅಗ್ನಿಶಾಮಕದಳಗಳನ್ನು ನಿಯೋಜಿಸಲಾಗಿದ್ದು ಒಟ್ಟು ಸಾವಿನ ಸಂಖ್ಯೆ 582ಕ್ಕೇರಿದೆ. ಕಾಡ್ಗಿಚ್ಚಿನ ಅಟ್ಟಹಾಸಕ್ಕೆ ಕಡಿವಾಣ ಹಾಕುವ ಕಾರ್ಯಾಚರಣೆಗಾಗಿ 9 ಯುರೋಪಿಯನ್ ದೇಶಗಳಿಂದ 10 ವಿಮಾನಗಳು ಹಾಗೂ ಹೆಲಿಕಾಪ್ಟರ್ಗಳ ತಂಡ ಆಗಮಿಸಿದ್ದು, ಬೆಂಕಿ ಜ್ವಾಲೆಗಳನ್ನು ನಂದಿಸುವ ಕಾರ್ಯದಲ್ಲಿ ತೊಡಗಿದೆ.
ಆಗಸ್ಟ್ 19ರಂದು ಈಶಾನ್ಯ ಗ್ರೀಸ್ ನಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚು ಪ್ರಖರವಾದ ತಾಪಮಾನದಿಂದಾಗಿ ಅಲೆಕ್ಸಾಂಡ್ರೌಪೊಲಿಸ್ ಹಾಗೂ ಎವ್ರೊಸ್ ಪ್ರಾಂತದ ವಿಶಾಲ ಅರಣ್ಯ ಪ್ರದೇಶಗಳನ್ನು ಆಕ್ರಮಿಸಿದೆ ಹಾಗೂ ಮನೆಗಳನ್ನು ಸುಟ್ಟುಭಸ್ಮ ಮಾಡಿದೆ.
ಕಳೆದ ವಾರ ಕನಿಷ್ಠ ಕಾಡ್ಗಿ ಚ್ಚಿಗೆ ಸಂಬಂಥಿಸಿದ ದುರಂತಗಳಲ್ಲಿ ಮೃತಪಟ್ಟ 21 ಮಂದಿಯ ಪೈಕಿ 20 ಮಂದಿ ಟರ್ಕಿಯ ಜೊತೆ ಗಡಿಯನ್ನು ಹಂಚಿಕೊಂಡಿರುವ ಗ್ರೀಸ್ ನ ಸಮೀಪ ಪ್ರದೇಶಗಳ ನಿವಾಸಿಗಳೆಂದು ತಿಳಿದುಬಂದಿದೆ.
ಈ ವರ್ಷದಿಂದೀಚೆಗೆ ಗ್ರೀಸ್ ನ ವಿವಿಧೆಡೆ ಸಂಭವಿಸಿದ ಕಾಡ್ಗಿಚ್ಚಿನ ಹಾವಳಿಯಲ್ಲಿ ಅಗ್ನಿಶಾಮಕದಳದ ಹೆಲಿಕಾಪ್ಟರ್ನ ಇಬ್ಬರ ತಂಡ ಸೇರಿದಂತೆ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಬುಧವಾರ ಬೆಳಗ್ಗೆ ಗ್ರೀಸ್ ಸಂಸತ್ ಕಲಾಪದ ವೇಳೆ ಕಾಡ್ಗಿಚ್ಚು ದುರಂತದಲ್ಲಿ ಮೃತಪಟ್ಟವರಿಗೆ ಗೌರವ ಸೂಚಿಸಿ ಒಂದು ನಿಮಿಷಗಳ ವೌನ ಪ್ರಾರ್ಥನೆ ನಡೆಸಿದರು.