ಭಾರತೀಯ ಮೂಲದ ಮೂವರು ತಜ್ಞರು ಅಮೆರಿಕ ಫೆಡರಲ್ ರಿಸರ್ವ್ ನ ಪ್ರಮುಖ ಸಮಿತಿಗಳಿಗೆ ಸೇರ್ಪಡೆ

ರಘುರಾಮ್ ರಾಜನ್ , ರಾಜ್ ಚೆಟ್ಟಿ , ಆಶಾ ಶರ್ಮಾ | Photo Credit : X \ @bsindia
ವಾಶಿಂಗ್ಟನ್, ಜು.16: ವರ್ಷಗಳ ಕಾಲ ಎದುರಾಗಿದ್ದ ತೀವ್ರ ಹಣದುಬ್ಬರದ ನಂತರ, ತನ್ನ ವಿತ್ತೀಯ ನೀತಿ ರಚನೆಯ ಚೌಕಟ್ಟನ್ನು ಮರುಪರಿಶೀಲಿಸುವ ಉದ್ದೇಶದಿಂದ ಅಮೆರಿಕ ಫೆಡರಲ್ ರಿಸರ್ವ್ (ಸೆಂಟ್ರಲ್ ಬ್ಯಾಂಕ್) ವ್ಯಾಪಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಇದರ ಭಾಗವಾಗಿ ಹೊಸದಾಗಿ ರಚಿಸಲಾದ ಒಂದು ಕಾರ್ಯಪಡೆಗೆ ಭಾರತೀಯ ರಿಸರ್ವ್ ಬ್ಯಾಂಕ್ ನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರನ್ನು ನೇಮಕ ಮಾಡಲಾಗಿದೆ.
ಫೆಡರಲ್ ರಿಸರ್ವ್ ಅಧ್ಯಕ್ಷ ಕೆವಿನ್ ವಾರ್ಶ್ ಅವರು ಪ್ರಕಟಿಸಿರುವ ವಿವಿಧ ಸಮಿತಿಗಳಲ್ಲಿ ರಾಜನ್ ಅವರೊಂದಿಗೆ ಇತರ ಇಬ್ಬರು ಭಾರತೀಯ ಮೂಲದ ತಜ್ಞರಾದ ದೆಹಲಿ ಮೂಲದ ಅಮೆರಿಕನ್ ಅರ್ಥಶಾಸ್ತ್ರಜ್ಞ ರಾಜ್ ಚೆಟ್ಟಿ ಮತ್ತು ಮೈಕ್ರೋಸಾಫ್ಟ್ನ ಹಿರಿಯ ಕಾರ್ಯನಿರ್ವಾಹಕಿ ಆಶಾ ಶರ್ಮಾ ಸೇರಿಕೊಳ್ಳಲಿದ್ದಾರೆ.
Next Story




