ರಶ್ಯದಲ್ಲಿ ಭಾರತೀಯ ಮೂಲದ ಮೂವರು ಯುವಕರು ನಾಪತ್ತೆ

ಸಾಂದರ್ಭಿಕ ಚಿತ್ರ | Photo Credit : magnific.com
ಮಾಸ್ಕೊ: ರಶ್ಯ-ಯುಕ್ರೇನ್ ಸಂಘರ್ಷದ ನಡುವೆ ಮಾಸ್ಕೋದಲ್ಲಿರುವ ತಮ್ಮ ಮಕ್ಕಳೊಂದಿಗೆ ಸಂಪರ್ಕ ಕಳೆದುಕೊಂಡ ನಂತರ ಪಶ್ಚಿಮ ಉತ್ತರ ಪ್ರದೇಶದ ಮೂವರು ಯುವಕರ ಕುಟುಂಬಗಳು ಆತಂಕದಿಂದ ದಿನ ದೂಡುತ್ತಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಮೂವರು ಯುವಕರು ʼಸ್ಟಡಿ ವೀಸಾ'ದಲ್ಲಿ ರಶ್ಯಗೆ ತೆರಳಿದ್ದರು ಮತ್ತು ಅಲ್ಲಿ ರಶ್ಯನ್ ಭಾಷಾ ಕೋರ್ಸ್ ಕಲಿಯುತ್ತಿದ್ದರು. ನಾಪತ್ತೆಯಾದ ಯುವಕರನ್ನು ಮುಜಫರ್ ನಗರದ ಹಿಮಾಂಶು ಶರ್ಮಾ (24), ಶಕ್ತಿ ಪುಂಡೀರ್ (23) ಮತ್ತು ಶ್ಯಾಮ್ಲಿ ಜಿಲ್ಲೆಯ ಆಶು ಸೈನಿ (25) ಎಂದು ಗುರುತಿಸಲಾಗಿದೆ. ಈ ಮೂವರೂ ಮಾಸ್ಕೊದಲ್ಲಿ ಒಂದೇ ಕೊಠಡಿಯನ್ನು ಹಂಚಿಕೊಂಡು ವಾಸಿಸುತ್ತಿದ್ದರು. ರಶ್ಯನ್ ಅಧಿಕಾರಿಗಳು ತಮ್ಮ ಪಾಸ್ಪೋರ್ಟ್ಗಳನ್ನು ವಶಪಡಿಸಿಕೊಂಡು, ಬಲವಂತವಾಗಿ ಮಿಲಿಟರಿ ಸೇವೆಗೆ ಸೇರಿಸುತ್ತಿದ್ದಾರೆ ಎಂದು ಸಂಪರ್ಕ ಕಡಿತಗೊಳ್ಳುವ ಮೊದಲು ಈ ಯುವಕರು ತಿಳಿಸಿರುವುದಾಗಿ ಅವರ ಸಂಬಂಧಿಕರು ಹೇಳಿದ್ದಾರೆ.
Next Story




