ಅಮೆರಿಕ | ಟಿಕ್ಟಾಕ್ ನಿಷೇಧದ ಗಡುವನ್ನು 3 ತಿಂಗಳು ವಿಸ್ತರಿಸಿದ ಟ್ರಂಪ್

ಡೊನಾಲ್ಡ್ ಟ್ರಂಪ್ |PC : NDTV
ವಾಷಿಂಗ್ಟನ್, ಸೆ.17: ಚೀನಾದೊಂದಿಗೆ ಒಪ್ಪಂದ ಮಾಡಿಕೊಂಡ ಬಳಿಕ ಅಮೆರಿಕಾದಲ್ಲಿ ಸಾಮಾಜಿಕ ಮಾಧ್ಯಮ ಆ್ಯಪ್ ಟಿಕ್ ಟಾಕ್ ಸ್ಥಗಿತಗೊಳಿಸುವ ಗಡುವನ್ನು ಅಧ್ಯಕ್ಷ ಟ್ರಂಪ್ ಡಿಸೆಂಬರ್ 16ರವರೆಗೆ ವಿಸ್ತರಿಸಿರುವುದಾಗಿ ವರದಿಯಾಗಿದೆ.
ಟಿಕ್ ಟಾಕ್ ಕುರಿತ ಕಾರ್ಯನಿರ್ವಾಹಕ ಆದೇಶಕ್ಕೆ ಮಂಗಳವಾರ ಟ್ರಂಪ್ ಸಹಿ ಹಾಕಿದ್ದು ಇದರೊಂದಿಗೆ ಗಡುವನ್ನು ನಾಲ್ಕನೇ ಬಾರಿಗೆ ವಿಸ್ತರಿಸಿದಂತಾಗಿದೆ. ಬೀಜಿಂಗ್ ಮೂಲದ ಟಿಕ್ ಟಾಕ್ ಅಮೆರಿಕಾದಲ್ಲಿ ಕಾರ್ಯನಿರ್ವಹಿಸಬೇಕಿದ್ದರೆ ತನ್ನ ಆಸ್ತಿಗಳನ್ನು ಅಮೆರಿಕದ ಕಂಪೆನಿಗೆ ಮಾರಾಟ ಮಾಡಬೇಕು ಅಥವಾ ನಿಷೇಧ ಎದುರಿಸಬೇಕು ಎಂದು ಅಮೆರಿಕದ ಶಾಸಕಾಂಗ ಸೂಚಿಸಿತ್ತು ಮತ್ತು ಆರಂಭದಲ್ಲಿ ಜನವರಿ 19ರ ಗಡುವು ವಿಧಿಸಿತ್ತು. ಇದನ್ನು ಈಗ ಡಿಸೆಂಬರ್ 16ರವರೆಗೆ ವಿಸ್ತರಿಸಲಾಗಿದೆ.
Next Story





