ಅಮೆರಿಕದ ಉನ್ನತ ಸೇನಾಧಿಕಾರಿ ವಜಾ: ಮಾಧ್ಯಮ ವರದಿ

ಬ್ರೆಟ್ ಸಿಲ್ವಿಯಾ | Photo Credit : AP
ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಮತ್ತೆ ದೊಡ್ಡ ಮಟ್ಟದ ದಾಳಿಗಳನ್ನು ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ವರದಿಗಳ ನಡುವೆಯೇ ಅಮೆರಿಕ ತನ್ನ ಉನ್ನತ ಮಿಲಿಟರಿ ಯೋಜಕರನ್ನು ಹುದ್ದೆಯಿಂದ ವಜಾಗೊಳಿಸಿದೆ ಎಂದು `ದಿ ಅಟ್ಲಾಂಟಿಕ್' ವರದಿ ಮಾಡಿದೆ.
ಜಾಯಿಂಟ್ ಚೀಫ್ಸ್ ಆಫ್ ಸ್ಟಾಫ್ನಲ್ಲಿ ತಂತ್ರಜ್ಞಾನ, ಯೋಜನೆ ಮತ್ತು ನೀತಿ ವಿಭಾಗದ ಮುಖ್ಯಸ್ಥರಾಗಿದ್ದ ಆರ್ಮಿ ಲೆ| ಜ| ಬ್ರೆಟ್ ಸಿಲ್ವಿಯಾ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ. ಸಿಲ್ವಿಯಾ ಅವರ ನಿರ್ಗಮನಕ್ಕೆ ಯಾವುದೇ ಕಾರಣವನ್ನು ನೀಡಲಾಗಿಲ್ಲ ಮತ್ತು ಯಾವುದೇ ಪರ್ಯಾಯ ಅಧಿಕಾರಿಯನ್ನು ನೇಮಿಸಲಾಗಿಲ್ಲ ಎಂದು ರಕ್ಷಣಾ ಇಲಾಖೆಯ ಮೂಲಗಳನ್ನು ಉಲ್ಲೇಖಿಸಿದ ವರದಿ ತಿಳಿಸಿದೆ
Next Story




