ಅಮೆರಿಕದಿಂದ ಭಾರತದ ಮೇಲೆ ವ್ಯಾಪಾರ ಒತ್ತಡ ಅಕ್ರಮ: ರಶ್ಯ ಖಂಡನೆ

PC | PTI
ಮಾಸ್ಕೋ, ಆ.5: ರಶ್ಯದಿಂದ ತೈಲ ಖರೀದಿಸುತ್ತಿರುವುದಕ್ಕಾಗಿ ಭಾರತದ ವಿರುದ್ಧ ಅಮೆರಿಕವು ವ್ಯಾಪಾರ ಒತ್ತಡ ಹೇರುತ್ತಿರುವುದು ಅಕ್ರಮ ಎಂದು ರಶ್ಯ ಆರೋಪಿಸಿದೆ.
ರಶ್ಯದೊಂದಿಗೆ ವ್ಯಾಪಾರ ಸಂಬಂಧವನ್ನು ಕಡಿತಗೊಳಿಸುವಂತೆ ದೇಶಗಳನ್ನು ಬಲವಂತಪಡಿಸುವ ಪ್ರಯತ್ನಗಳಿಗೆ ಸಂಬಂಧಿಸಿದ ಹೇಳಿಕೆ, ಬೆದರಿಕೆಯನ್ನು ನಾವು ಗಮನಿಸಿದ್ದೇವೆ. ಇಂತಹ ಹೇಳಿಕೆಗಳು ಕಾನೂನು ಬಾಹಿರವಾಗಿದೆ. ಸಾರ್ವಭೌಮ ರಾಷ್ಟ್ರಗಳು ತಮ್ಮ ವ್ಯಾಪಾರ ಪಾಲುದಾರರನ್ನು, ವ್ಯಾಪಾರ ಮತ್ತು ಆರ್ಥಿಕ ಸಹಕಾರದ ಪಾಲುದಾರರನ್ನು ಆಯ್ಕೆ ಮಾಡುವ, ತಮ್ಮ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ವ್ಯಾಪಾರ, ಆರ್ಥಿಕ ಸಹಕಾರದ ಸ್ವರೂಪವನ್ನು ನಿರ್ಧರಿಸುವ ಹಕ್ಕುಗಳನ್ನು ಹೊಂದಿವೆ' ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
Next Story





