ಬಲೂಚಿಸ್ತಾನದಲ್ಲಿ ರೈಲು ಅಪಹರಣ | ಪ್ರಯಾಣಿಕರ ಜೊತೆ ಆತ್ಮಹತ್ಯಾ ಬಾಂಬರ್ ಗಳು ಆಸೀನ!

PC : PTI
ಕ್ವೆಟ್ಟಾ : ಸೊಂಟಕ್ಕೆ ಬಾಂಬ್ಗಳನ್ನು ಕಟ್ಟಿಕೊಂಡಿರುವ ಬಿಎಲ್ಎ ಉಗ್ರರು ಒತ್ತೆಸೆರೆಯಲ್ಲಿರುವ ಕೆಲವು ಪ್ರಯಾಣಿಕರ ನಡುವೆ ಕುಳಿತುಕೊಂಡಿರುವುದು ರಕ್ಷಣಾ ಕಾರ್ಯಾಚರಣೆಯನ್ನುಜಟಿಲಗೊಳಿಸಿದೆಂದು ಪಾಕ್ ಭದ್ರತಾಪಡೆಗಳ ಮೂಲಗಳು ತಿಳಿಸಿವೆ. ಉಗ್ರರು ಅನೇಕ ಪ್ರಯಾಣಿಕರ ಮೇಲೂ ದಾಳಿ ನಡೆಸಿದ್ದು, ಕೆಲವರು ಸಾವನ್ನಪ್ಪಿದ್ದಾರೆ. ಇನ್ನು ಕೆಲವರು ಗಾಯಗೊಂಡಿದ್ದಾರೆಂದು ಬಂಧಮುಕ್ತಿಗೊಂಡಿರುವ ಮುಹಮ್ಮದ್ ಅಶ್ರಫ್ ತಿಳಿಸಿದ್ದಾರೆ.
ರೈಲನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡ ಬಳಿಕ ಉಗ್ರರು ಪ್ರಯಾಣಿಕರ ಗುರುತಿನ ತಪಾಸಣೆ ನೆಡೆಸಿದರು. ಉಗ್ರರು ಸೈನಿಕರು ಹಾಗೂ ಭದ್ರತಾ ಸಿಬ್ಬಂದಿಗಳಿಗಾಗಿ ಹುಡುಕಾಡುತ್ತಿದ್ದರು ಎಂದು ಬಂಧಮುಕ್ತಗೊಂಡ ಒತ್ತೆಯಾಳುಗಳು ತಿಳಿಸಿದ್ದಾರೆ.
Next Story