ಮುಂದಿನ ವಾರ ಅಬುಧಾಬಿಯಲ್ಲಿ ರಶ್ಯ, ಉಕ್ರೇನ್, ಅಮೆರಿಕ ತ್ರಿಪಕ್ಷೀಯ ಸಭೆ

Photo Credit : aljazeera.com
ವಾಶಿಂಗ್ಟನ್: ಉಕ್ರೇನ್ ವಿರುದ್ಧದ ರಶ್ಯದ ಯುದ್ಧವನ್ನು ಕೊನೆಗೊಳಿಸುವುದು, ಯುದ್ಧೋತ್ತರ ಭದ್ರತಾ ಒಪ್ಪಂದಗಳು ಮತ್ತು ಪರಿಸ್ಥಿತಿಯನ್ನು ತಿಳಿಗೊಳಿಸುವ ಕುರಿತು ಚರ್ಚಿಸಲು ನವೆಂಬರ್ 10-11 ರಂದು ಅಬುಧಾಬಿಯಲ್ಲಿ ಉಕ್ರೇನ್, ರಶ್ಯ ಮತ್ತು ಅಮೆರಿಕದ ನಿಯೋಗಗಳ ನಡುವೆ ತ್ರಿಪಕ್ಷೀಯ ಮಾತುಕತೆ ನಡೆಯಲಿದೆ ಎಂದು ಅಮೆರಿಕ ರಾಯಭಾರಿ ಸ್ಟೀವ್ ವಿಟ್ಕಾಫ್ ಸೋಮವಾರ ತಿಳಿಸಿದ್ದಾರೆ.
ಉಕ್ರೇನ್ನ ಭದ್ರತಾ ಖಾತರಿಗಳು, ಯುರೋಪಿನ ಭವಿಷ್ಯದ ಭದ್ರತಾ ವ್ಯವಸ್ಥೆ ಮತ್ತು ಉಕ್ರೇನ್ನ ಪುನರ್ನಿರ್ಮಾಣಕ್ಕಾಗಿ ಆರ್ಥಿಕ ಬೆಂಬಲ ಕುರಿತು ಚರ್ಚಿಸಲು ಅಮೆರಿಕದ ಸಂಧಾನಕಾರರು ಈ ವಾರ ಬ್ರಸೆಲ್ಸ್ನಲ್ಲಿ ಫ್ರಾನ್ಸ್, ಜರ್ಮನಿ, ಬ್ರಿಟನ್, ಯುರೋಪಿಯನ್ ಯೂನಿಯನ್ ಮತ್ತು ನ್ಯಾಟೋ ಪ್ರತಿನಿಧಿಗಳೊಂದಿಗೆ ಕಾರ್ಯಕಾರಿ ಮಟ್ಟದಲ್ಲಿ ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ,
Next Story




