ಬೆಂಜಮಿನ್ ನೆತನ್ಯಾಹು ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿದ ತುರ್ಕಿಯೆ

ಬೆಂಜಮಿನ್ ನೆತನ್ಯಾಹು | Photo Credit : AP , PTI
ಅಂಕಾರಾ: ಗಾಝಾಕ್ಕೆ ತೆರಳುತ್ತಿದ್ದ ಪರಿಹಾರ ಸಾಮಗ್ರಿಗಳ ದೋಣಿಗಳನ್ನು ಇಸ್ರೇಲ್ ತಡೆದ ಪ್ರಕರಣದ ತನಿಖೆಯ ಭಾಗವಾಗಿ, ತುರ್ಕಿಯೆ ಸರಕಾರವು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಅಂತಾರಾಷ್ಟ್ರೀಯ ಬಂಧನ ವಾರಂಟ್ ಜಾರಿಗೊಳಿಸಿದೆ ಎಂದು ನ್ಯಾಯ ಸಚಿವಾಲಯ ಶುಕ್ರವಾರ ತಿಳಿಸಿದೆ.
ತುರ್ಕಿಯೆ ಫೆಲೆಸ್ತೀನ್ ಜನರು, ಶೋಷಿತರು ಮತ್ತು ಮಾನವೀಯತೆಯ ಕಟು ಸತ್ಯದ ಪರವಾಗಿ ದೃಢವಾಗಿ ನಿಲ್ಲುವುದನ್ನು ಮುಂದುವರಿಸುತ್ತದೆ. ಹಾಗೆಯೇ ಮಾನವೀಯತೆಯ ವಿರುದ್ಧ ಅಪರಾಧ ಎಸಗಿದವರು ಕಾನೂನಿನ ಮುಂದೆ ಹೊಣೆಗಾರರಾಗುವುದನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ದೃಢನಿಶ್ಚಯದಿಂದ ತೆಗೆದುಕೊಳ್ಳುತ್ತದೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.
Next Story




