ಗಾಝಾದಿಂದ ಫೆಲೆಸ್ತೀನೀಯರನ್ನು ಕರೆದೊಯ್ಯಲು ಜೋರ್ಡನ್, ಈಜಿಪ್ಟ್ ಗೆ ಟ್ರಂಪ್ ಒತ್ತಡ

ಡೊನಾಲ್ಡ್ ಟ್ರಂಪ್ | PC : PTI
ವಾಷಿಂಗ್ಟನ್: ಗಾಝಾವನ್ನು `ಸ್ವಚ್ಛಗೊಳಿಸುವ' ಸಂಭಾವ್ಯ ಯೋಜನೆಯನ್ನು ರೂಪಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು ಅದರಂತೆ ಯುದ್ಧದಿಂದ ಜರ್ಝರಿತಗೊಂಡ ಪ್ರದೇಶದಿಂದ ಫೆಲೆಸ್ತೀನೀಯರನ್ನು ಕರೆದೊಯ್ಯುವಂತೆ ಜೋರ್ಡಾನ್ ಮತ್ತು ಈಜಿಪ್ಟ್ ಮೇಲೆ ಒತ್ತಡ ಹೇರುವುದಾಗಿ ಹೇಳಿದ್ದಾರೆ.
ವಸತಿ ನಿರ್ಮಿಸುವ ಮತ್ತು 1 ದಶಲಕ್ಷಕ್ಕೂ ಹೆಚ್ಚು ಫೆಲೆಸ್ತೀನೀಯರನ್ನು ಗಾಝಾ ಪಟ್ಟಿಯಿಂದ ಇತರ ದೇಶಗಳಿಗೆ ಸ್ಥಳಾಂತರಿಸುವ ಯೋಜನೆಯ ಬಗ್ಗೆ ಜೋರ್ಡಾನ್ ದೊರೆಯೊಂದಿಗೆ ಮಾತನಾಡಿದ್ದೇನೆ. ಈಜಿಪ್ಟ್ ಅಧ್ಯಕ್ಷರ ಜತೆಯೂ ಮಾತನಾಡಲಿದ್ದೇನೆ ಎಂದು ಟ್ರಂಪ್ ಹೇಳಿರುವುದಾಗಿ ಸಿಎನ್ಎನ್ ವರದಿ ಮಾಡಿದೆ.
Next Story





