ಮಧ್ಯಪ್ರಾಚ್ಯದ ಸಂಘರ್ಷಕ್ಕೆ ಪರಿಹಾರದ ಬಗ್ಗೆ ನಿರ್ಧರಿಸುತ್ತೇನೆ: ಟ್ರಂಪ್

ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್: ಇಸ್ರೇಲ್-ಫೆಲೆಸ್ತೀನ್ ಬಿಕ್ಕಟ್ಟಿಗೆ ದೀರ್ಘಾವಧಿಯ ಪರಿಹಾರದ ಬಗ್ಗೆ ತನಗೆ ಯಾವುದು ಸರಿ ಎನಿಸುತ್ತದೆ ಎಂಬುದನ್ನು ನಿರ್ಧರಿಸುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ.
ದಶಕಗಳಿಂದಲೂ ಮುಂದುವರಿದಿರುವ ಇಸ್ರೇಲಿ-ಫೆಲೆಸ್ತೀನಿಯನ್ ಸಂಘರ್ಷದ ಬಗ್ಗೆ ಉಲ್ಲೇಖಿಸಿದ ಟ್ರಂಪ್ `ಹಲವರು ಒಂದು ರಾಷ್ಟ್ರದ ಪರಿಹಾರ ಸೂತ್ರ, ಕೆಲವರು ಎರಡು ರಾಷ್ಟ್ರಗಳ ಪರಿಹಾರ ಸೂತ್ರವನ್ನು ಮೆಚ್ಚಿದ್ದಾರೆ. ಈ ಬಗ್ಗೆ ಗಮನ ಹರಿಸಬೇಕಾಗಿದೆ. ನನಗೆ ಏನು ಸರಿಯೆನಿಸುತ್ತದೆ ಎಂಬುದನ್ನು ನಿರ್ಧರಿಸುತ್ತೇನೆ. ಆದರೆ ಇತರ ರಾಷ್ಟ್ರಗಳೊಂದಿಗೆ ಸಮನ್ವಯ ಸಾಧಿಸುತ್ತೇನೆ' ಎಂದು ಹೇಳಿದ್ದಾರೆ.
ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳಲ್ಲಿ ಸುಮಾರು 75%ದಷ್ಟು ಸದಸ್ಯರು ಫೆಲೆಸ್ತೀನ್ ರಾಷ್ಟ್ರವನ್ನು ಗುರುತಿಸಿವೆ. ಕಳೆದ ತಿಂಗಳು ಬ್ರಿಟನ್ ಮತ್ತು ಕೆನಡಾ ಕೂಡಾ ಫೆಲೆಸ್ತೀನ್ ರಾಷ್ಟ್ರವನ್ನು ಮಾನ್ಯ ಮಾಡುವ ನಿರ್ಧಾರ ತಳೆದಿರುವುದನ್ನು ಇಸ್ರೇಲ್ನ ನಿಕಟ ಮಿತ್ರ ಅಮೆರಿಕ ಟೀಕಿಸಿತ್ತು.
Next Story





