ತಕ್ಷಣ ಮಾತುಕತೆಗೆ ಮುಂದಾಗದಿದ್ದರೆ ಘೋರ ಪರಿಣಾಮ ಎದುರಿಸಬೇಕು: ಇರಾನ್ಗೆ ಟ್ರಂಪ್ ಎಚ್ಚರಿಕೆ

ಡೊನಾಲ್ಡ್ ಟ್ರಂಪ್ | Photo Credit : AP \ PTI
ವಾಷಿಂಗ್ಟನ್, ಜ.28: ಪರಮಾಣು ಶಸ್ತ್ರಾಸ್ತ್ರ ತ್ಯಜಿಸುವ ಒಪ್ಪಂದದ ಬಗ್ಗೆ ತಕ್ಷಣ ಮಾತುಕತೆಗೆ ಮುಂದಾಗದಿದ್ದರೆ, ಇರಾನ್ ಮೇಲೆ ಮುಂದಿನ ದಾಳಿ ಅತ್ಯಂತ ಮಾರಕವಾಗಲಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕದ ವಿಮಾನವಾಹಕ ಯುದ್ಧನೌಕೆಗಳ ಮತ್ತೊಂದು ತಂಡ ಇರಾನ್ ಕಡೆಗೆ ಮುಂದುವರಿದಿದ್ದು, ‘ಅಗತ್ಯವಿದ್ದರೆ ವೇಗವಾಗಿ ಮಾರಕ ಹೊಡೆತ ನೀಡಲು ಸಿದ್ಧವಾಗಿದೆ’ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
‘ಪರಮಾಣು ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದಂತೆ ನ್ಯಾಯಯುತ ಮತ್ತು ಸಮಾನ ಒಪ್ಪಂದಕ್ಕಾಗಿ ಇರಾನ್ ಮಾತುಕತೆಗೆ ಮುಂದಾಗಬೇಕು. ಸಮಯ ಅಮೂಲ್ಯವಾಗಿದೆ’ ಎಂದು ಅವರು ಆಗ್ರಹಿಸಿದ್ದಾರೆ. ‘ಪರಮಾಣು ಅಸ್ತ್ರ ಹೊಂದುವುದಿಲ್ಲ’ ಎಂಬ ನ್ಯಾಯಯುತ ಒಪ್ಪಂದಕ್ಕೆ ಇರಾನ್ ಸಹಿ ಹಾಕುವುದು ಎಲ್ಲರಿಗೂ ಒಳ್ಳೆಯದು. ಇರಾನ್ ಹಿಂದಿನ ತಪ್ಪುಗಳನ್ನು ಪುನರಾವರ್ತಿಸುವುದಿಲ್ಲ ಎಂಬ ನಿರೀಕ್ಷೆಯಿದೆ ಎಂದು ಟ್ರಂಪ್ ಹೇಳಿದ್ದಾರೆ.
Next Story





