ಬೆಂಕಿಗೆ ತುಪ್ಪ ಸುರಿಯುತ್ತಿರುವ ಟ್ರಂಪ್: ಚೀನಾ ಆರೋಪ

PC : X \ @AJEnglish
ಬೀಜಿಂಗ್: ಇರಾನ್ ರಾಜಧಾನಿ ಟೆಹ್ರಾನ್ನ ನಿವಾಸಿಗಳು ತಕ್ಷಣ ಸ್ಥಳಾಂತರಗೊಳ್ಳಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿರುವುದನ್ನು ಖಂಡಿಸಿರುವ ಚೀನಾ, ಟ್ರಂಪ್ ಇರಾನ್-ಇಸ್ರೇಲ್ ನಡುವೆ ಹೊತ್ತಿ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ ಎಂದು ಆರೋಪಿಸಿದೆ.
`ಬೆಂಕಿಯ ಜ್ವಾಲೆಗೆ ಗಾಳಿ ಬೀಸುವುದು, ತುಪ್ಪ ಸುರಿಯುವುದು, ಬೆದರಿಕೆಯೊಡ್ಡುವುದು ಹಾಗೂ ಒತ್ತಡ ಹೆಚ್ಚಿಸುವುದು ಉದ್ವಿಗ್ನತೆ ಶಮನಗೊಳಿಸುವುದಕ್ಕೆ ನೆರವಾಗುವುದಿಲ್ಲ. ಆದರೆ ಸಂಘರ್ಷವನ್ನು ವ್ಯಾಪಕ ಮತ್ತು ತೀವ್ರಗೊಳಿಸುತ್ತದೆ ಎಂದು ಚೀನಾ ವಿದೇಶಾಂಗ ಇಲಾಖೆಯ ವಕ್ತಾರ ಗುವೊ ಜಿಯಾಕುನ್ ಹೇಳಿದ್ದಾರೆ.
Next Story





