ಗ್ರೀನ್ ಕಾರ್ಡ್ ನಿಯಮ ಬಿಗಿಗೊಳಿಸಲು ಟ್ರಂಪ್ ಆಡಳಿತ ಪ್ರಸ್ತಾಪ

ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್: ಫಿಸಿಯೋಥೆರಪಿಸ್ಟ್ಗಳು ಮತ್ತು ನರ್ಸ್ಗಳಿಂದ ಹಿಡಿದು ಉನ್ನತ ಕೌಶಲ್ಯದ ವೃತ್ತಿಪರರವರೆಗಿನ ಉದ್ಯೋಗಗಳಲ್ಲಿ `ಅಮೆರಿಕನ್ನರಿಗೆ ಮೊದಲ ಆದ್ಯತೆ' ಸಿಗುವಂತೆ ಮಾಡುವ ಉದ್ದೇಶದಿಂದ, ವಿದೇಶಿ ಕಾರ್ಮಿಕರಿಗೆ ನೀಡಲಾಗುವ ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ ನಿಯಮಗಳನ್ನು ಬಿಗಿಗೊಳಿಸಲು ಟ್ರಂಪ್ ಆಡಳಿತ ಪ್ರಸ್ತಾಪಿಸಿದೆ.
ವಿದೇಶಿ ಕಾರ್ಮಿಕರಿಗಿಂತ ಹೆಚ್ಚಾಗಿ ಅಮೆರಿಕನ್ ಕಾರ್ಮಿಕರಿಗೆ ಉನ್ನತ-ಕೌಶಲ್ಯದ, ಹೆಚ್ಚಿನ ವೇತನದ ಉದ್ಯೋಗಾವಕಾಶಗಳಲ್ಲಿ ಮೊದಲ ಆದ್ಯತೆ ಸಿಗುವಂತೆ ಹೊಸ ನಿಯಮಗಳು ಖಚಿತಪಡಿಸುತ್ತವೆ ಎಂದು ಕಾರ್ಮಿಕ ಕಾರ್ಯದರ್ಶಿ ಕೀತ್ ಸೊಂಡಲಿರ್ಂಗ್ ಹೇಳಿದ್ದಾರೆ. ಪರಿಷ್ಕೃತ ಚೌಕಟ್ಟಿನ ಅಡಿಯಲ್ಲಿ, ಫಿಸಿಯೋಥೆರಪಿಸ್ಟ್ಗಳು, ನರ್ಸ್ಗಳು ಮತ್ತು ವಿಜ್ಞಾನ ಅಥವಾ ಕಲೆಯಲ್ಲಿ ಅಸಾಧಾರಣ ಸಾಮರ್ಥ್ಯ ಅಗತ್ಯವಿರುವ ಹುದ್ದೆಗಳಿಗೆ ನೇಮಕಾತಿ ಮಾಡುವ ಉದ್ಯೋಗದಾತರು ಅರ್ಹ ಅಮೆರಿಕನ್ ಅರ್ಜಿದಾರರನ್ನು ಪರಿಗಣಿಸಬೇಕಾಗುತ್ತದೆ.
Next Story




