ಹಾರ್ಮುಝ್ ಮೇಲಿನ 20% ಸುಂಕದ ನಿರ್ಧಾರದಿಂದ ಹಿಂದೆ ಸರಿದ ಟ್ರಂಪ್

ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್, ಜು.14: ಹಾರ್ಮುಝ್ ಜಲಸಂಧಿ ಮೂಲಕ ಹಾದುಹೋಗುವ ಸರಕುಗಳ ಮೇಲೆ ತಾವು ಪ್ರಸ್ತಾಪಿಸಿದ್ದ ಶೇಕಡಾ 20ರಷ್ಟು ‘ಮರುಪಾವತಿ ಶುಲ್ಕ’ ವಿಧಿಸುವ ನಿರ್ಧಾರದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹಿಂದೆ ಸರಿದಿದ್ದಾರೆ.
ಇದಕ್ಕೆ ಬದಲಾಗಿ ಗಲ್ಫ್ ದೇಶಗಳೊಂದಿಗೆ ವ್ಯಾಪಾರ ಮತ್ತು ಹೂಡಿಕೆ ಒಪ್ಪಂದಗಳನ್ನು ಮಾಡಿಕೊಳ್ಳಲಾಗುವುದು. ‘ಮಧ್ಯಪ್ರಾಚ್ಯದ ನಾಯಕರೊಂದಿಗೆ ನಡೆದ ಅತ್ಯಂತ ಯಶಸ್ವಿ ಮಾತುಕತೆಗಳ ಆಧಾರದ ಮೇಲೆ, ಶೇಕಡಾ 20ರಷ್ಟು ಶುಲ್ಕದ ಬದಲಾಗಿ ವಿವಿಧ ಗಲ್ಫ್ ದೇಶಗಳು ಅಮೆರಿಕದಲ್ಲಿ ಮಾಡಲಿರುವ ವ್ಯಾಪಾರ ಮತ್ತು ಹೂಡಿಕೆ ಒಪ್ಪಂದಗಳಿಗೆ ಮುಂದಾಗಲು ನಿರ್ಧರಿಸಿದ್ದೇನೆ. ಆ ಹೂಡಿಕೆಗಳು ಬೃಹತ್ ಪ್ರಮಾಣದಲ್ಲಿರಲಿವೆ’ ಎಂದು ತಿಳಿಸಿದ ಅವರು, ಇರಾನ್ ಬಂದರುಗಳಿಗೆ ಹೋಗುವ ಮತ್ತು ಬರುವ ಅಥವಾ ಇರಾನ್ ಸರಕುಗಳನ್ನು ಸಾಗಿಸುವ ಹಡಗುಗಳ ಮೇಲೆ ಸಂಪೂರ್ಣ ದಿಗ್ಬಂಧನ ಜಾರಿಯಲ್ಲಿದೆ ಎಂದು ಹೇಳಿದ್ದಾರೆ.
Next Story




