ಟ್ರಂಪ್ ನರಕಕ್ಕೆ ಹೋಗಬಹುದು, ಆದರೆ ಗಾಝಾದ ಮಾಲಕರು ನಾವೇ: ಗಾಝಾ ನಿವಾಸಿಗಳ ಪ್ರತಿಕ್ರಿಯೆ

Photo: PTI
ಗಾಝಾ: ಗಾಝಾ ಪಟ್ಟಿಯ ನಿಯಂತ್ರಣವನ್ನು ಪಡೆಯುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪವನ್ನು ಟೀಕಿಸಿರುವ ಗಾಝಾ ನಿವಾಸಿಗಳು, ಫೆಲೆಸ್ತೀನ್ ಪ್ರದೇಶದಲ್ಲಿ ತಮ್ಮ ಮನೆಗಳು ಧ್ವಂಸಗೊಂಡಿದ್ದರೂ ಈ ಪ್ರದೇಶವನ್ನು ಎಂದಿಗೂ ಬಿಟ್ಟು ತೆರಳುವುದಿಲ್ಲ ಎಂದು ಹೇಳಿದ್ದಾರೆ.
`ತನ್ನ ಯೋಜನೆಗಳು, ತನ್ನ ಹಣ ಮತ್ತು ತನ್ನ ನಂಬಿಕೆಯ ಸಹಿತ ಟ್ರಂಪ್ ಬೇಕಿದ್ದರೆ ನರಕಕ್ಕೆ ಹೋಗಬಹುದು. ಆದರೆ ನಾವು ಎಲ್ಲಿಗೂ ಹೋಗುವುದಿಲ್ಲ. ನಾವು ಟ್ರಂಪ್ ಅವರ ಆಸ್ತಿಗಳಲ್ಲ. ಟ್ರಂಪ್ ಗಾಝಾ ಬಿಕ್ಕಟ್ಟನ್ನು ಪರಿಹರಿಸಲು ನಿಜವಾಗಿಯೂ ಬಯಸಿದ್ದರೆ ಅವರು ಇಸ್ರೇಲಿಯನ್ನರನ್ನು ಫೆಲೆಸ್ತೀನ್ ಪ್ರದೇಶದಿಂದ ಸ್ಥಳಾಂತರಿಸಿ ಅಮೆರಿಕದ ಯಾವುದಾದರೊಂದು ರಾಜ್ಯದಲ್ಲಿ ನೆಲೆಗೊಳಿಸಬೇಕು. ಅವರು ಹೊರಗಿನವರು, ಫೆಲೆಸ್ತೀನೀಯರಲ್ಲ. ನಾವು ಈ ಭೂಮಿಯ ಮಾಲಿಕರು ಎಂದು ಗಾಝಾ ನಿವಾಸಿಗಳು ಪ್ರತಿಕ್ರಿಯಿಸಿದ್ದಾರೆ.
Next Story