ಟ್ರಂಪ್ ಯೋಜನೆ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ: ಹಮಾಸ್

ಡೊನಾಲ್ಡ್ ಟ್ರಂಪ್ PC | PTI
ಗಾಝಾ : ಗಾಝಾವನ್ನು ಸ್ವಾಧೀಪಡಿಸಿಕೊಳ್ಳುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ಫೆಲೆಸ್ತೀನ್ ಸಶಸ್ತ್ರ ಹೋರಾಟಗಾರರ ಗುಂಪು ಹಮಾಸ್ ಖಂಡಿಸಿದ್ದು ಇದು ಬೆಂಕಿಗೆ ತುಪ್ಪ ಸುರಿದಂತೆ ಆಗುತ್ತದೆ. ಮಧ್ಯಪ್ರಾಚ್ಯ ಹಿಂಸಾಚಾರದ ಜ್ವಾಲೆಗಳಿಂದ ಮತ್ತೆ ಪ್ರಜ್ವಲಿಸಲಿದೆ ಎಂದಿದೆ.
ಗಾಝಾ ಪಟ್ಟಿಯನ್ನು ಆಕ್ರಮಿಸುವ ಉದ್ದೇಶದ ಈ ಪ್ರಸ್ತಾಪವು ನಮ್ಮ ಜನರಿಗೆ ಹಾನಿಕಾರಕವಾಗಿದೆ. ಈ ಪ್ರದೇಶದಲ್ಲಿ ಸ್ಥಿರತೆಗೆ ಅಡ್ಡಿಯಾಗಲಿದೆ ಎಂದು ಹಮಾಸ್ ಪ್ರತಿಕ್ರಿಯಿಸಿದೆ.
Next Story