Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಅ.1ರಿಂದ ಔಷಧಿಗಳಿಗೆ ಶೇ.100 ಸುಂಕ...

ಅ.1ರಿಂದ ಔಷಧಿಗಳಿಗೆ ಶೇ.100 ಸುಂಕ ಘೋಷಿಸಿದ ಟ್ರಂಪ್, ಭಾರತಕ್ಕೂ ಹೊಡೆತ ಬೀಳುವ ಸಾಧ್ಯತೆ

ವಾರ್ತಾಭಾರತಿವಾರ್ತಾಭಾರತಿ26 Sept 2025 7:56 AM IST
share
ಅ.1ರಿಂದ ಔಷಧಿಗಳಿಗೆ ಶೇ.100 ಸುಂಕ ಘೋಷಿಸಿದ ಟ್ರಂಪ್, ಭಾರತಕ್ಕೂ ಹೊಡೆತ ಬೀಳುವ ಸಾಧ್ಯತೆ

ವಾಷಿಂಗ್ಟನ್,ಸೆ.26: ಅ.1ರಿಂದ ಬ್ರ್ಯಾಂಡೆಡ್ ಮತ್ತು ಪೇಟೆಂಟ್ ಹೊಂದಿರುವ ಔಷಧಿಗಳ ಆಮದುಗಳ ಮೇಲೆ ಶೇ.100ರಷ್ಟು ಸುಂಕವನ್ನು ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗುರುವಾರ ಪ್ರಕಟಿಸಿದ್ದಾರೆ. ಈ ಕ್ರಮವು ಅಮೆರಿಕದೊಂದಿಗೆ ವ್ಯಾಪಾರದ ಮೇಲೆ ಹೆಚ್ಚು ಅವಲಂಬಿತವಾಗಿರುವ ದೇಶಿಯ ಉದ್ಯಮಗಳಲ್ಲಿ ಒಂದಾಗಿರುವ ಭಾರತೀಯ ಔಷಧಿ ವಲಯದ ಮೇಲೆ ಗಮನಾರ್ಹ ಪರಿಣಾಮವನ್ನು ಬೀರಬಹುದು.

‘ಅ.1,2025ರಿಂದ ಕಂಪೆನಿಗಳು ತಮ್ಮ ಔಷಧಿ ತಯಾರಿಕೆ ಘಟಕವನ್ನು ಅಮೆರಿಕದಲ್ಲಿ ಸ್ಥಾಪಿಸದಿದ್ದರೆ ಯಾವುದೇ ಬ್ರ್ಯಾಂಡೆಡ್ ಅಥವಾ ಪೇಟೆಂಟ್ ಹೊಂದಿರುವ ಔಷಧಿ ಉತ್ಪನ್ನದ ಮೇಲೆ ನಾವು ಶೇ.100ರಷ್ಟು ಸುಂಕವನ್ನು ವಿಧಿಸುತ್ತೇವೆ ’ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮ ಟ್ರುಥ್ ಸೋಷಿಯಲ್‌ನಲ್ಲಿ ಹೇಳಿದ್ದಾರೆ.

ಟ್ರಂಪ್ ವ್ಯಾಪಾರ ಚೌಕಟ್ಟುಗಳು ಮತ್ತು ಆಮದು ತೆರಿಗೆಗಳನ್ನು ಕಳೆದ ಆಗಸ್ಟ್‌ನಲ್ಲೇ ಪ್ರಕಟಿಸಿದ್ದರೂ ಅವರ ಸುಂಕಾಸ್ತ್ರ ಅಲ್ಲಿಗೇ ಅಂತ್ಯಗೊಂಡಿಲ್ಲ ಎನ್ನುವುದನ್ನು ಅವರ ಪೋಸ್ಟ್‌ಗಳು ತೋರಿಸಿವೆ. ತೆರಿಗೆಗಳು ಬಜೆಟ್ ಕೊರತೆಯನ್ನು ಕಡಿಮೆ ಮಾಡಲು ನೆರವಾಗುವ ಜೊತೆಗೆ ದೇಶಿಯ ಉತ್ಪಾದನೆಯನ್ನೂ ಹೆಚ್ಚಿಸುತ್ತವೆ ಎಂಬ ಟ್ರಂಪ್ ವಿಶ್ವಾಸವನ್ನು ಇವು ಪ್ರತಿಬಿಂಬಿಸಿವೆ.

ಯಾವುದೇ ಕಂಪೆನಿಯು ಅಮೆರಿಕದಲ್ಲಿ ತನ್ನ ತಯಾರಿಕೆ ಘಟಕದ ನಿರ್ಮಾಣವನ್ನು ಆರಂಭಿಸಿದ್ದರೆ ಅದರ ಔಷಧಿ ಉತ್ಪನ್ನಗಳ ಮೇಲೆ ಯಾವುದೇ ಸುಂಕವನ್ನು ವಿಧಿಸಲಾಗುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ತನ್ನ ಇತ್ತೀಚಿನ ಸುಂಕಾಸ್ತ್ರದಲ್ಲಿ ಟ್ರಂಪ್ ಕಿಚನ್ ಕ್ಯಾಬಿನೆಟ್‌ಗಳು ಮತ್ತು ಬಾಥ್‌ರೂಮ್ ವ್ಯಾನಿಟಿಗಳ ಮೇಲೆ ಶೇ.50,ಸಜ್ಜುಗೊಳಿಸಿದ ಪೀಠೋಪಕರಣಗಳ ಮೇಲೆ ಶೇ.30 ಮತ್ತು ಘನ ಲಾರಿಗಳ ಮೇಲೆ ಶೇ.25ರಷ್ಟು ಸುಂಕವನ್ನೂ ವಿಧಿಸಿದ್ದಾರೆ.

ಟ್ರಂಪ್ ಸುಂಕಗಳಿಗೆ ಕಾನೂನು ಸಮರ್ಥನೆಯನ್ನು ಒದಗಿಸಿರದಿದ್ದರೂ ‘ರಾಷ್ಟ್ರೀಯ ಭದ್ರತೆ ಮತ್ತು ಇತರ ಕಾರಣಗಳಿಗಾಗಿ’ ತೆರಿಗೆಗಳ ಅಗತ್ಯವಿದೆ ಎಂದು ಹೇಳುವ ಮೂಲಕ ಕಮಾಂಡರ್-ಇನ್-ಚೀಫ್ ಆಗಿ ತನ್ನ ಪಾತ್ರದ ಮಿತಿಗಳನ್ನು ವಿಸ್ತರಿಸಿಕೊಂಡಂತೆ ಕಂಡುಬರುತ್ತಿದೆ.

ಭಾರತದ ಮೇಲೆ ಹೇಗೆ ಪರಿಣಾಮ ಬೀರಬಹುದು?

ಭಾರತದ ಔಷಧೀಯ ಉತ್ಪನ್ನಗಳಿಗೆ ಅಮೆರಿಕವು ಅತ್ಯಂತ ದೊಡ್ಡ ರಫ್ತು ಮಾರುಕಟ್ಟೆಯಾಗಿದೆ. ಭಾರತೀಯ ಔಷಧಿ ರಫ್ತು ಉತ್ತೇಜನ ಮಂಡಳಿಯ ಪ್ರಕಾರ ವಿತ್ತವರ್ಷ 24ರಲ್ಲಿ ಭಾರತವು 27.9 ಶತಕೋಟಿ ಡಾ.ಮೌಲ್ಯದ ಔಷಧಿಗಳನ್ನು ರಫ್ತು ಮಾಡಿದ್ದು,ಈ ಪೈಕಿ ಶೇ.31 ಅಥವಾ 8.7 ಶತಕೋಟಿ ಡಾ.(77,138 ಕೋ.ರೂ.) ಮೌಲ್ಯದ ಔಷಧಿಗಳು ಅಮೆರಿಕವನ್ನು ತಲುಪಿದ್ದವು. 2025ರ ಮೊದಲ ಆರು ತಿಂಗಳುಗಳಲ್ಲಿ ಇನ್ನೂ 3.7 ಶತಕೋಟಿ ಡಾ.(32,505 ಕೋ.ರೂ.) ಮೌಲ್ಯದ ಔಷಧಿಗಳನ್ನು ಭಾರತದಿಂದ ರಪ್ತು ಮಾಡಲಾಗಿದೆ.

ವರದಿಗಳ ಪ್ರಕಾರ ಅಮೆರಿಕದಲ್ಲಿ ಬಳಕೆಯಾಗುತ್ತಿರುವ ಜೆನೆರಿಕ್ ಔಷಧಿಗಳ ಶೇ.45ಕ್ಕಿಂತ ಹೆಚ್ಚು ಮತ್ತು ಬಯೊಸಿಮಿಲರ್ ಔಷಧಿಗಳ(ಉಲ್ಲೇಖ ಔಷಧಿಯನ್ನು ಹೋಲುವ ಜೈವಿಕ ಔಷಧಿ) ಶೇ.15ರಷ್ಟನ್ನು ಭಾರತವು ಪೂರೈಸುತ್ತಿದೆ. ಡಾ.ರೆಡ್ಡಿಸ್, ಅರಬಿಂದೋ ಫಾರ್ಮಾ, ಝೈಡ್ಸ್ ಲೈಫ್‌ಸೈನ್ಸಸ್, ಸನ್ ಫಾರ್ಮಾ ಮತ್ತು ಗ್ಲ್ಯಾಂಡ್ ಫಾರ್ಮಾದಂತಹ ಕಂಪೆನಿಗಳು ತಮ್ಮ ಒಟ್ಟು ಆದಾಯದ ಶೇ.30ರಿಂದ ಶೇ.50ರಷ್ಟನ್ನು ಅಮೆರಿಕದ ಮಾರುಕಟ್ಟೆಯಿಂದ ಗಳಿಸುತ್ತಿವೆ.

ಅಮೆರಿಕದ ಇತ್ತೀಚಿನ ಸುಂಕಗಳು ಮುಖ್ಯವಾಗಿ ಬಹುರಾಷ್ಟ್ರೀಯ ದೈತ್ಯ ಕಂಪೆನಿಗಳು ಪ್ರಾಬಲ್ಯ ಹೊಂದಿರುವ ಬ್ರ್ಯಾಂಡೆಡ್ ಮತ್ತು ಪೇಟೆಂಟ್ ಪಡೆದ ಔಷಧಿಗಳನ್ನು ಗುರಿಯಾಗಿಸಿಕೊಂಡಂತೆ ಕಂಡು ಬರುತ್ತಿದ್ದರೂ ಭಾರತದ ಸಂಕೀರ್ಣ ಜೆನೆರಿಕ್ಸ್ ಮತ್ತು ವಿಶೇಷ ಔಷಧಿಗಳೂ ಈ ಬಗ್ಗೆ ಪರಿಶೀಲನೆಗೆ ಒಳಪಡಲಿವೆಯೇ ಎಂಬ ಬಗ್ಗೆ ಅನಿಶ್ಚಿತತೆಯಿದೆ. ಅಲ್ಲದೆ ದೊಡ್ಡ ಕಂಪೆನಿಗಳು ಈಗಾಗಲೇ ಅಮೆರಿಕದಲ್ಲಿ ತಮ್ಮ ತಯಾರಿಕೆ ಸೌಲಭ್ಯಗಳನ್ನು ಹೊಂದಿವೆ.

ಅಮೆರಿಕದ ಗ್ರಾಹಕರು ಭಾರತದ ಜೆನೆರಿಕ್ ಔಷಧಿಗಳನ್ನು ಅವಲಂಬಿಸಿದ್ದಾರೆ. ಹೆಚ್ಚಿನ ಸುಂಕವು ಬೆಲೆ ಏರಿಕೆ, ಹಣದುಬ್ಬರ ಮತ್ತು ದೇಶದಲ್ಲಿ ಔಷಧಿಗಳ ಕೊರತೆಗೆ ಕಾರಣವಾಗಲಿದೆ. ಈ ನಡುವೆ ಅಮೆರಿಕದ ಜೆನೆರಿಕ್ಸ್ ವಲಯದಲ್ಲಿ ಕಡಿಮೆ ಲಾಭದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಕಂಪೆನಿಗಳ ಮೇಲೂ ಸುಂಕಗಳನ್ನು ಹೇರಿದರೆ ವೆಚ್ಚಗಳನ್ನು ಭರಿಸಲು ಅವು ಪರದಾಡಬೇಕಾಗುತ್ತದೆ ಮತ್ತು ಅಂತಿಮವಾಗಿ ಆ ಹೊರೆಯನ್ನು ಅಮೆರಿಕದ ಗ್ರಾಹಕರು ಅಥವಾ ವಿಮೆ ಕಂಪನಿಗಳಿಗೆ ವರ್ಗಾಯಿಸಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X