ಇರಾನಿನಲ್ಲಿ ಆಡಳಿತ ಬದಲಾವಣೆ ಬಯಸುವುದಿಲ್ಲ: ಟ್ರಂಪ್

Photo credit: PTI
ವಾಷಿಂಗ್ಟನ್: ಅವ್ಯವಸ್ಥೆಗೆ ಕಾರಣವಾಗುವುದರಿಂದ ಇರಾನಿನಲ್ಲಿ ಆಡಳಿತದ ಬದಲಾವಣೆಯನ್ನು ತಾನು ಬಯಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ.
ಇಸ್ರೇಲ್-ಇರಾನ್ ನಡುವಿನ 12 ದಿನಗಳ ಯುದ್ಧಕ್ಕೆ ಕದನ ವಿರಾಮ ಘೋಷಿಸಿದ ಕೆಲ ಗಂಟೆಗಳ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಟ್ರಂಪ್ `ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದುವುದಿಲ್ಲ ಮತ್ತು ಇಸ್ರೇಲ್ ದಾಳಿಯಲ್ಲಿ ನಾಶಗೊಂಡ ಪರಮಾಣು ಸೌಲಭ್ಯಗಳನ್ನು ಮರು ನಿರ್ಮಿಸುವುದಿಲ್ಲ' ಎಂದು ಹೇಳಿದ್ದಾರೆ.
Next Story