Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. US Midterm Election | ಡೆಮೋಕ್ರಾಟ್ ಗಳ...

US Midterm Election | ಡೆಮೋಕ್ರಾಟ್ ಗಳ ಗೆಲುವಿನ ಬೆನ್ನಲ್ಲೇ ಟ್ರಂಪ್ ಮೀಡಿಯಾ ಷೇರುಗಳಿಗೆ ಭಾರಿ ಹೊಡೆತ; ಟ್ರಂಪ್‌ ಗೆ 73 ಮಿಲಿಯನ್ ಡಾಲರ್ ನಷ್ಟ

ನ. 3ರ ಚುನಾವಣಾ ಫಲಿತಾಂಶದ ಬಳಿಕ ಶೇ. 11ಕ್ಕೂ ಹೆಚ್ಚು ಕುಸಿದ ಷೇರುಗಳು; 2026ರಲ್ಲಿ ಒಟ್ಟಾರೆ ಶೇ. 55ಕ್ಕೂ ಅಧಿಕ ಕುಸಿತ

ವಾರ್ತಾಭಾರತಿವಾರ್ತಾಭಾರತಿ4 Nov 2026 11:57 PM IST
share
US Midterm Election | ಡೆಮೋಕ್ರಾಟ್ ಗಳ ಗೆಲುವಿನ ಬೆನ್ನಲ್ಲೇ ಟ್ರಂಪ್ ಮೀಡಿಯಾ ಷೇರುಗಳಿಗೆ ಭಾರಿ ಹೊಡೆತ; ಟ್ರಂಪ್‌ ಗೆ 73 ಮಿಲಿಯನ್ ಡಾಲರ್ ನಷ್ಟ

ವಾಶಿಂಗ್ಟನ್: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮೋಕ್ರಾಟ್ ಗಳು ಕಾಂಗ್ರೆಸ್ ನ ಎರಡೂ ಸದನಗಳ ಮೇಲೆ ಹಿಡಿತ ಸಾಧಿಸಿದ ಬೆನ್ನಲ್ಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಲೀಕತ್ವದ ಟ್ರಂಪ್ ಮೀಡಿಯಾ & ಟೆಕ್ನಾಲಜಿ ಗ್ರೂಪ್ ನ ಷೇರುಗಳು ಭಾರಿ ಕುಸಿತ ಕಂಡಿವೆ. ಬುಧವಾರ ಅಮೆರಿಕದ ಷೇರು ಮಾರುಕಟ್ಟೆ ಆರಂಭವಾದ ಕೆಲವೇ ಹೊತ್ತಿನಲ್ಲಿ ಶೇ. 11ಕ್ಕೂ ಹೆಚ್ಚು ಕುಸಿದ ಷೇರುಗಳು ಸಾರ್ವಕಾಲಿಕ ಕನಿಷ್ಠ ಮಟ್ಟ ತಲುಪಿವೆ. ಇದರಿಂದ ಟ್ರಂಪ್ ಅವರ ಅಂದಾಜು 6.5 ಶತಕೋಟಿ ಡಾಲರ್ ಸಂಪತ್ತಿನಲ್ಲಿ 73 ಮಿಲಿಯನ್ ಡಾಲರ್ ನಷ್ಟವಾಗಿದೆ ಎಂದು ಫೋರ್ಬ್ಸ್ ವರದಿ ಮಾಡಿದೆ.

ಟ್ರಂಪ್ ಅವರ ಸಾಮಾಜಿಕ ಮಾಧ್ಯಮ ವೇದಿಕೆ 'ಟ್ರೂತ್ ಸೋಶಿಯಲ್'ನ ಹಿಂದಿರುವ ಕಂಪೆನಿಯ ಷೇರುಗಳು ಪ್ರತಿ ಷೇರಿಗೆ 5.23 ಡಾಲರ್‌ ಗೆ ಕುಸಿದಿವೆ. ಕಳೆದ ವಾರ ದಾಖಲಾಗಿದ್ದ 5.40 ಡಾಲರ್ ನ ಹಿಂದಿನ ಕನಿಷ್ಠ ಮಟ್ಟವನ್ನೂ ಇದು ಮೀರಿಸಿದೆ. ಈ ಮೂಲಕ ಕಂಪೆನಿಯ ಷೇರುಗಳು ಸಾರ್ವಕಾಲಿಕ ಕನಿಷ್ಠ ಮಟ್ಟ ತಲುಪಿವೆ.

ನ. 3ರಂದು ನಡೆದ ಮಧ್ಯಂತರ ಚುನಾವಣೆಯಲ್ಲಿ ಡೆಮೋಕ್ರಾಟ್ ಗಳು ಸೆನೆಟ್ ಮತ್ತು ಪ್ರತಿನಿಧಿಗಳ ಸಭೆ ಎರಡರ ಮೇಲೂ ಹಿಡಿತ ಸಾಧಿಸಿದ್ದಾರೆ. ಚುನಾವಣಾ ಫಲಿತಾಂಶ ಸ್ಪಷ್ಟವಾಗುವ ಮುನ್ನ ಅಂದಿನ ವಹಿವಾಟಿನಲ್ಲಿ ಟ್ರಂಪ್ ಮೀಡಿಯಾ ಷೇರುಗಳು ಸುಮಾರು ಶೇ. 5ರಷ್ಟು ಏರಿಕೆ ಕಂಡಿದ್ದವು. ಆದರೆ, ಡೆಮೋಕ್ರಾಟ್ ಗಳ ಗೆಲುವು ಖಚಿತವಾಗುತ್ತಿದ್ದಂತೆ ಆ ಏರಿಕೆಯ ಬಹುಪಾಲು ಲಾಭ ಕಳೆದುಕೊಂಡವು ಎಂದು 24/7 ವಾಲ್ ಸ್ಟ್ರೀಟ್ ವರದಿ ಮಾಡಿದೆ.

►2026ರಲ್ಲಿ ಶೇ. 55ಕ್ಕೂ ಅಧಿಕ ಕುಸಿತ

ಟ್ರಂಪ್ ಮೀಡಿಯಾ ಷೇರುಗಳು 2026ರಲ್ಲಿ ಈಗಾಗಲೇ ಭಾರಿ ಕುಸಿತ ದಾಖಲಿಸಿವೆ. ಈ ವರ್ಷ ಷೇರುಗಳ ಮೌಲ್ಯ ಶೇ. 55ಕ್ಕೂ ಹೆಚ್ಚು ಕುಸಿದಿದೆ ಎಂದು ಫೋರ್ಬ್ಸ್ ವರದಿ ತಿಳಿಸಿದೆ. ಮತ್ತೊಂದು ಮಾರುಕಟ್ಟೆ ವರದಿಯ ಪ್ರಕಾರ, ವರ್ಷದ ಆರಂಭದಿಂದ ಈವರೆಗಿನ ಕುಸಿತ ಶೇ. 60ರಷ್ಟಿದೆ.

ಕಳೆದ ಒಂದು ತಿಂಗಳಲ್ಲೇ ಷೇರುಗಳ ಮೌಲ್ಯ ಸುಮಾರು ಶೇ. 41ರಷ್ಟು ಕುಸಿದಿದೆ. ಇತ್ತೀಚಿನ ಚುನಾವಣಾ ಫಲಿತಾಂಶದಿಂದ ಉಂಟಾದ ಕುಸಿತಕ್ಕೂ ಮುನ್ನವೇ ಕಂಪೆನಿ ಷೇರು ಮಾರುಕಟ್ಟೆಯಲ್ಲಿ ಒತ್ತಡ ಎದುರಿಸುತ್ತಿತ್ತು ಎಂದು 24/7 ವಾಲ್ ಸ್ಟ್ರೀಟ್ ವರದಿ ಮಾಡಿದೆ.

►238.1 ಮಿಲಿಯನ್ ಡಾಲರ್ ನಷ್ಟ

ಷೇರುಗಳ ಇತ್ತೀಚಿನ ಕುಸಿತಕ್ಕೂ ಮುನ್ನವೇ ಟ್ರಂಪ್ ಮೀಡಿಯಾ ಹಣಕಾಸಿನ ಒತ್ತಡದಲ್ಲಿತ್ತು. 2026ರ ಎರಡನೇ ತ್ರೈಮಾಸಿಕದಲ್ಲಿ ಕಂಪೆನಿ 238.1 ಮಿಲಿಯನ್ ಡಾಲರ್ ನಿವ್ವಳ ನಷ್ಟ ದಾಖಲಿಸಿತ್ತು. ಇದೇ ಅವಧಿಯಲ್ಲಿ ಕಂಪೆನಿಯ ಆದಾಯ ಕೇವಲ 1.7 ಮಿಲಿಯನ್ ಡಾಲರ್ ಆಗಿತ್ತು ಎಂದು ಇನ್ವೆಸ್ಟರ್ಸ್ಹಬ್ ವರದಿ ಮಾಡಿದೆ.

ಈ ನಷ್ಟದ ಬಹುಪಾಲು ಡಿಜಿಟಲ್ ಸ್ವತ್ತುಗಳು ಮತ್ತು ಇಕ್ವಿಟಿ ಸೆಕ್ಯುರಿಟಿಗಳ ಮೇಲಿನ 190.4 ಮಿಲಿಯನ್ ಡಾಲರ್ ಅವಾಸ್ತವಿಕ ನಷ್ಟದಿಂದ ಉಂಟಾಗಿತ್ತು. ಇದರ ಜತೆಗೆ ಕಂಪೆನಿ 25.6 ಮಿಲಿಯನ್ ಡಾಲರ್ ಕಾನೂನು ವೆಚ್ಚವನ್ನೂ ದಾಖಲಿಸಿತ್ತು.

►ವಿಲೀನಕ್ಕೆ ಇನ್ನೂ ಅನುಮೋದನೆ ಬಾಕಿ

ಟ್ರಂಪ್ ಮೀಡಿಯಾದ ವಿಲೀನ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಒಪ್ಪಂದ ಮುಂದುವರಿಯಲು ಷೇರುದಾರರು ಮತ್ತು ನಿಯಂತ್ರಕ ಸಂಸ್ಥೆಗಳ ಅನುಮೋದನೆ ಅಗತ್ಯವಿದೆ.

ನ. 9ರಂದು ಅಮೆರಿಕದ ಷೇರು ಮಾರುಕಟ್ಟೆ ವಹಿವಾಟು ಮುಕ್ತಾಯಗೊಂಡ ಬಳಿಕ ಕಂಪೆನಿ 2026ರ ಮೂರನೇ ತ್ರೈಮಾಸಿಕದ ಹಣಕಾಸು ಫಲಿತಾಂಶಗಳನ್ನು ಪ್ರಕಟಿಸಲಿದೆ. ಅದೇ ಸಂಜೆ ಗಳಿಕೆಯ ಕುರಿತ ಸಭೆಯನ್ನೂ ನಡೆಸಲು ಯೋಜಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X