ಹಾರ್ಮುಝ್ ಜಲಸಂಧಿ ಅಮೆರಿಕದ ಪ್ರದೇಶ: ಪುನರುಚ್ಚರಿಸಿದ ಟ್ರಂಪ್

ವಾಷಿಂಗ್ಟನ್: ಹಾರ್ಮುಝ್ ಜಲಸಂಧಿಯು ಅಮೆರಿಕದ ಪ್ರದೇಶ ಎಂಬ ಹೇಳಿಕೆಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ.
ಟ್ರೂತ್ ಸೋಷಿಯಲ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ‘ಹೊಸ ಯುಎಸ್ ಪ್ರದೇಶ’ ಎಂಬ ಶೀರ್ಷಿಕೆಯೊಂದಿಗೆ ಹಾರ್ಮುಝ್ ಜಲಸಂಧಿಯನ್ನು ವೃತ್ತಾಕಾರದಲ್ಲಿ ಗುರುತಿಸಿರುವ ಪ್ರದೇಶದ ನಕ್ಷೆಯನ್ನು ಒಳಗೊಂಡ ಚಿತ್ರವನ್ನು ಟ್ರಂಪ್ ಹಂಚಿಕೊಂಡಿದ್ದಾರೆ.
ಒಂದು ವಾರದ ಅವಧಿಯಲ್ಲಿ ಟ್ರಂಪ್ ಈ ಚಿತ್ರವನ್ನು ಹಂಚಿಕೊಂಡಿರುವುದು ಇದು ಎರಡನೇ ಬಾರಿ. ಆದರೆ, ಈ ಬಾರಿ ಚಿತ್ರದೊಂದಿಗೆ ಯಾವುದೇ ಶೀರ್ಷಿಕೆ ಅಥವಾ ವ್ಯಾಖ್ಯಾನವನ್ನು ಅವರು ನೀಡಿಲ್ಲ.
ದಕ್ಷಿಣ ಕೆರೊಲಿನಾದಲ್ಲಿ ನಡೆದ ರ‍್ಯಾಲಿಯಲ್ಲಿ ‘ಹಾರ್ಮುಝ್ ಜಲಸಂಧಿಯನ್ನು ಈಗ ಅಮೆರಿಕದ ಪ್ರದೇಶವೆಂದು ನೋಡುತ್ತಿದ್ದೇನೆ’ ಎಂದು ಟ್ರಂಪ್ ಹೇಳಿದ ಒಂದು ದಿನದ ಬಳಿಕ ಈ ಪೋಸ್ಟ್ ಪ್ರಕಟವಾಗಿದೆ.
TRUMP: Posts image labeling Strait of Hormuz as new U.S. territory pic.twitter.com/5Yqwg7TzkT
— Trump Truths (@trumptruthsbot) August 22, 2026
Next Story






