ಅಮೆರಿಕದ 250ನೇ ಸ್ವಾತಂತ್ರ್ರೋತ್ಸವದ ದಿನ ಶ್ವೇತಭವನದಲ್ಲಿ UFC ಫೈಟ್ : ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್ : ಅಮೆರಿಕ ದೇಶದ 250ನೇ ಸ್ವಾತಂತ್ರ್ರೋತ್ಸವದ ಪ್ರಯುಕ್ತ ಶ್ವೇತಭವನದಲ್ಲಿ ಅಲ್ಟಿಮೇಟ್ ಫೈಟಿಂಗ್ ಚಾಂಪಿಯನ್ಶಿಪ್ (ಯುಎಫ್ಸಿ) ಆಯೋಜಿಸಲು ಚಿಂತನೆ ನಡೆಸುತ್ತಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಒವಾ ರಾಜ್ಯದ ಡೆಸ್ ಮೊಯಿನ್ಸ್ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, ಯುಎಫ್ಸಿ ಅಧ್ಯಕ್ಷ ಡಾನಾ ವೈಟ್ ನನ್ನ ಆಪ್ತ ಸ್ನೇಹಿತ, ನಾವು ಶ್ವೇತಭವನದ ಆವರಣದಲ್ಲಿ ಯುಎಫ್ಸಿ ಕಾಳಗ ನಡೆಸಲಿದ್ದೇವೆ. ಅದರ ಬಗ್ಗೆ ಯೋಚಿಸಿ' ಎಂದು ಹೇಳಿದ್ದಾರೆ.
ನಮಗೆ ಅಲ್ಲಿ ಸಾಕಷ್ಟು ಜಾಗವಿದೆ. 250ನೇ ವರ್ಷಾಚರಣೆ ಪ್ರಯುಕ್ತ ಚಾಂಪಿಯನ್ಶಿಪ್ ಆಯೋಜಿಸಲಿದ್ದೇವೆ ಎಂದು ಹೇಳಿದ್ದಾರೆ. ಯುಎಫ್ಸಿಯ ದೊಡ್ಡ ಅಭಿಮಾನಿಯಾಗಿರುವ ಟ್ರಂಪ್, ಜೂನ್ನಲ್ಲಿ ನ್ಯೂಜೆರ್ಸಿಯಲ್ಲಿ ನಡೆದ ಸೆಣಸಾಟವನ್ನು ವೀಕ್ಷಿಸಿದ್ದರು.
ಯುಎಫ್ಸಿ ಮತ್ತು ಅದರ ಮೂಲ ಕಂಪೆನಿ 'ಟಿಕೆಒ ಗ್ರೂಪ್' ಈ ಬಗ್ಗೆ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Next Story





