ಇರಾನ್ ನಾಯಕ ಖಾಮಿನೈ ಅವರನ್ನು ಭೇಟಿಯಾಗಲು ಬಯಸುತ್ತೇನೆ: ಟ್ರಂಪ್

ಡೊನಾಲ್ಡ್ ಟ್ರಂಪ್ - ಮೊಜ್ತಾಬಾ ಖಾಮಿನೈ | PTI
ವಾಷಿಂಗ್ಟನ್, ಜೂ. 3: ಇರಾನ್ ನ ಸರ್ವೋಚ್ಛ ನಾಯಕ ಮೊಜ್ತಬಾ ಖಾಮಿನೈ ಅವರನ್ನು ಭೇಟಿಯಾಗಲು ಬಯಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಪರಿಸ್ಥಿತಿಯನ್ನು ಅವಲಂಬಿಸಿ, ಇರಾನ್ ನ ಅಯತೊಲ್ಲಾ ಅವರನ್ನು ಒಂದು ಹಂತದಲ್ಲಿ ಬಹುಶಃ ಭೇಟಿ ಮಾಡಬಹುದು ಎಂದು ಟ್ರಂಪ್ ಹೇಳಿದ್ದಾರೆ.
‘ಪರಮಾಣು ಶಸ್ತ್ರಾಸ್ತ್ರ ಹೊಂದದಿರಲು ಇರಾನ್ ಒಪ್ಪಿಕೊಂಡಿದೆ. ಅವರು ಪರಮಾಣು ಶಸ್ತ್ರಾಸ್ತ್ರವನ್ನು ಹೊಂದುವುದಿಲ್ಲ ಎಂದು ಈಗಾಗಲೇ ಒಪ್ಪಿಕೊಂಡಿದ್ದಾರೆ’ ಎಂದು ಟ್ರಂಪ್ ಹೇಳಿದ್ದಾರೆ.
ಲೆಬನಾನ್ ನೊಂದಿಗೆ ಇಸ್ರೇಲ್ ನ ಹೋರಾಟದಿಂದ ತನಗೆ ಸಂತೋಷವಾಗಿಲ್ಲ. ಆದರೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರೊಂದಿಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಅವರು ಹೇಳಿರುವುದಾಗಿ ‘ನ್ಯೂಯಾರ್ಕ್ ಪೋಸ್ಟ್’ ವರದಿ ಮಾಡಿದೆ.
Next Story




