ಚೀನಾ ಇರಾನ್ನ ತೈಲ ಖರೀದಿ ಮುಂದುವರಿಸಬಹುದು: ಟ್ರಂಪ್

PC: PTI
ವಾಷಿಂಗ್ಟನ್, ಜೂ.24: ಚೀನಾವು ಇರಾನಿನ ತೈಲ ಖರೀದಿಯನ್ನು ಮುಂದುವರಿಸಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿಕೆ ನೀಡಿದ್ದು ಇರಾನಿನ ವಿರುದ್ಧದ ನಿರ್ಬಂಧಗಳನ್ನು ಸಡಿಲಿಸುವ ಸೂಚನೆ ಇದಾಗಿರಬಹುದು ಎಂದು ಮಾಧ್ಯಮಗಳು ವಿಶ್ಲೇಷಿಸಿವೆ.
`ಚೀನಾ ಈಗ ಇರಾನಿನಿಂದ ತೈಲ ಖರೀದಿಸುವುದನ್ನು ಮುಂದುವರಿಸಬಹುದು. ಅವರು(ಚೀನಾ) ಅಮೆರಿಕದಿಂದಲೂ ಸಾಕಷ್ಟು ಖರೀದಿಸುತ್ತಾರೆ ಎಂದು ಆಶಿಸುತ್ತೇನೆ' ಎಂದು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ `ಟ್ರುಥ್ ಸೋಶಿಯಲ್'ನಲ್ಲಿ ಟ್ರಂಪ್ ಪೋಸ್ಟ್ ಮಾಡಿದ್ದಾರೆ.
Next Story