ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ಗೆ ಟ್ರಂಪ್ ಬೆಂಬಲ

ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್: ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ಗೆ ತಮ್ಮ ಆಡಳಿತವು ಬಲವಾದ ಬೆಂಬಲ ನೀಡುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ವಿಶ್ವಸಂಸ್ಥೆಯ ಮಹಾಸಭೆಯ ಸಭೆಯ ನೇಪಥ್ಯದಲ್ಲಿ ನಡೆದ ಗಲ್ಫ್ ಸಹಕಾರ ಮಂಡಳಿಯ ಬಹುಪಕ್ಷೀಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್ ` ನೆರೆಯ ದೇಶಗಳಲ್ಲಿ ವಾಣಿಜ್ಯ ಹಡಗುಗಳ ಮೇಲೆ ಇರಾನ್ ನಡೆಸುತ್ತಿರುವ ಭಯೋತ್ಪಾದಕ ದಾಳಿಗಳು, ಮಧ್ಯಪ್ರಾಚ್ಯದ ಇಂಧನ ಮೂಲಸೌಕರ್ಯವನ್ನು ಇರಾನ್ನ ತಪಾಸಣಾ ಕೇಂದ್ರಗಳಿಂದ ದೂರಕ್ಕೆ ಕೊಂಡೊಯ್ಯುವ ಅಗತ್ಯವನ್ನು ತೋರಿಸಿಕೊಟ್ಟಿವೆ. ಪೈಪ್ಲೈನ್ಗಳ ಮೂಲಕವೇ ಆಗಿರಲಿ ಅಥವಾ ಇನ್ನಾವುದೇ ಮಾರ್ಗದಲ್ಲಾಗಲಿ, ತೈಲ ಸಾಗಣೆಯ ವಿಷಯದಲ್ಲಿ ಈ ಪ್ರಾಂತವನ್ನು ದಶಕಗಳಿಂದ ಕಾಡುತ್ತಿರುವ ಸವಾಲುಗಳನ್ನು ನಾವು ಒಟ್ಟಾಗಿ ಮೆಟ್ಟಿನಿಲ್ಲುವ ಸನ್ನಿಹಿತದಲ್ಲಿದ್ದೇವೆ' ಎಂದು ಹೇಳಿದರು.
ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಎಂಬುದು ಬಹುರಾಷ್ಟ್ರೀಯ ಸಂಪರ್ಕ ಹಾಗೂ ಮೂಲಸೌಕರ್ಯ ಯೋಜನೆಯಾಗಿದ್ದು, ದಕ್ಷಿಣ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಯುರೋಪ್ಗಳ ನಡುವೆ ಸಂಪರ್ಕ, ವ್ಯಾಪಾರ ಮತ್ತು ಸುಸ್ಥಿರತೆಯನ್ನು ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ.




