ಇರಾನ್ಗೆ ಶಸ್ತ್ರಾಸ್ತ್ರ ರವಾನಿಸಿದರೆ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ: ಚೀನಾಕ್ಕೆ ಟ್ರಂಪ್ ಎಚ್ಚರಿಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (PTI)
ವಾಶಿಂಗ್ಟನ್: ಅಮೆರಿಕ ಮತ್ತು ಟೆಹ್ರಾನ್ ನಡುವಿನ ಕದನ ವಿರಾಮ ಮುಂದುವರಿಯುತ್ತಾ ಎಂಬ ಕಳವಳದ ಮಧ್ಯೆ ಇರಾನ್ಗೆ ಶಸ್ತ್ರಾಸ್ತ್ರಗಳನ್ನು ರವಾನಿಸಿದರೆ ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾಕ್ಕೆ ಎಚ್ಚರಿಕೆ ನೀಡಿದ್ದಾರೆ.
ಶ್ವೇತಭವನದಿಂದ ಮಿಯಾಮಿಗೆ ತೆರಳುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಇರಾನ್ಗೆ ಶಸ್ತ್ರಾಸ್ತ್ರಗಳನ್ನು ರವಾನಿಸಿದರೆ ಚೀನಾ ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು. ಆದರೆ ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲಿಲ್ಲ ಎಂದು ʼರಾಯಿಟರ್ಸ್ʼ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮುಂಬರುವ ದಿನಗಳಲ್ಲಿ ಇರಾನ್ ಚೀನಾದ ವಾಯು ರಕ್ಷಣಾ ವ್ಯವಸ್ಥೆಗಳನ್ನು ಪಡೆಯಬಹುದು ಎಂಬ ವರದಿ ಬೆನ್ನಲ್ಲೆ ಈ ಹೇಳಿಕೆಯನ್ನು ನೀಡಲಾಗಿದೆ. ವರದಿಯ ಪ್ರಕಾರ, ಚೀನಾ ಈ ಶಸ್ತ್ರ ಸಾಗಣೆಗಳನ್ನು ನೇರವಾಗಿ ಕಳುಹಿಸುವ ಬದಲು, ಮೂರನೇ ದೇಶಗಳ ಮೂಲಕ ರಹಸ್ಯವಾಗಿ ಸಾಗಿಸುವ ಸಾಧ್ಯತೆ ಇದೆ.
Next Story





