ನೌಕಾ ದಿಗ್ಬಂಧನಕ್ಕೆ ಸವಾಲು ಹಾಕಿದರೆ ತೀವ್ರ ಪರಿಣಾಮ: ಇರಾನ್ಗೆ ಟ್ರಂಪ್ ಎಚ್ಚರಿಕೆ

Photo: PTI
ವಾಶಿಂಗ್ಟನ್: ಅಮೆರಿಕದ ನೌಕಾ ದಿಗ್ಬಂಧನವನ್ನು ಪರೀಕ್ಷಿಸುವಂತೆ ಇರಾನ್ಗೆ ಸವಾಲು ಹಾಕಿರುವ ಟ್ರಂಪ್, ಅಮೆರಿಕದ ನೌಕಾಪಡೆಯ ಉಪಸ್ಥಿತಿಗೆ ಸವಾಲು ಹಾಕಲು ಇರಾನ್ ಪಡೆಗಳು ಪ್ರಯತ್ನಿಸಿದರೆ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಎಪ್ರಿಲ್ನಲ್ಲಿ ಮೊದಲ ಬಾರಿಗೆ ಹೇರಲಾದ ದಿಗ್ಬಂಧನವನ್ನು ಮುರಿಯಲು ಇರಾನ್ ಪ್ರಯತ್ನಿಸಲಿದೆಯೇ ಎಂದು `ಫಾಕ್ಸ್ ನ್ಯೂಸ್'ನ ವರದಿಗಾರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್ `ಅವರು ಹಾಗೆ ಮಾಡುತ್ತಾರೆಂದು ನಾನು ಭಾವಿಸುತ್ತೇನೆ. ಆಗ ಅವರ ನೌಕಾಪಡೆಯ ಉಳಿದ ಹಡಗುಗಳಂತೆ ಅವುಗಳೆಲ್ಲವೂ ಸಮುದ್ರದ ತಳ ಸೇರುತ್ತವೆ' ಎಂದು ಹೇಳಿದ್ದಾರೆ.
ಪ್ರಮುಖ ತೈಲ ರಫ್ತು ಕೇಂದ್ರವಾದ ಖಾರ್ಗ್ ದ್ವೀಪದಿಂದ ದಿಗ್ಬಂಧನವನ್ನು ಭೇದಿಸಲು ಇರಾನ್ ತೈಲ ಟ್ಯಾಂಕರ್ಗಳ ಬೆಂಗಾವಲು ಪಡೆಯನ್ನು ಸಿದ್ಧಪಡಿಸುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಈ ಎಚ್ಚರಿಕೆ ಬಂದಿದೆ. ರಾಜತಾಂತ್ರಿಕ ಪ್ರಯತ್ನಗಳು ಒಪ್ಪಂದಕ್ಕೆ ಬರಲು ವಿಫಲವಾದರೆ ಹೊಸ ವರ್ಷದ ನಂತರ ಇರಾನ್ ವಿರುದ್ಧ ಹೊಸದಾಗಿ ಮಿಲಿಟರಿ ದಾಳಿ ನಡೆಸಲು ಆದೇಶಿಸಬಹುದು ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದು, ಇರಾನ್ನೊಂದಿಗೆ ನಡೆಯುತ್ತಿರುವ ಮಾತುಕತೆಗಳನ್ನು ಅರ್ಥಹೀನ ಎಂದು ತಳ್ಳಿಹಾಕಿದ್ದಾರೆ.




