ಇರಾನ್ ಜೊತೆಗಿನ ಸಂಬಂಧ ಕಡಿತಗೊಳಿಸಿ: ಒಮಾನ್ಗೆ ಟ್ರಂಪ್ ಎಚ್ಚರಿಕೆ

ಡೊನಾಲ್ಡ್ ಟ್ರಂಪ್ | Photo Credit : PTI
ನ್ಯೂಯಾರ್ಕ್, ಜೂ.2: ಇರಾನ್ ಯುದ್ಧದಲ್ಲಿ ಒಮಾನ್ನ ತಟಸ್ಥ ನಿಲುವಿನ ಬಗ್ಗೆ ಅಮೆರಿಕ ಅಸಮಾಧಾನಗೊಂಡಿದೆ ಮತ್ತು ಯಾವುದಾದರೊಂದು ಪಕ್ಷದ ಪರ ನಿಲ್ಲುವಂತೆ ಆಗ್ರಹಿಸಿದೆ ಎಂದು ವಾಲ್ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಇರಾನ್ನೊಂದಿಗಿನ ಸಂಬಂಧ ಕಡಿತಗೊಳಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಮಾನ್ಗೆ ಸ್ಪಷ್ಟವಾಗಿ ಸೂಚಿಸಿರುವುದಾಗಿ ವರದಿಯಾಗಿದೆ.
ಯುದ್ಧ ಆರಂಭಗೊಂಡ ಬಳಿಕ ತಟಸ್ಥ ನಿಲುವು ತಳೆದಿರುವುದಾಗಿ ಒಮಾನ್ ಘೋಷಿಸಿದ್ದರೂ ಇರಾನ್ನೊಂದಿಗೆ ನಿಕಟ ಸಂಪರ್ಕ ಇರಿಸಿಕೊಂಡಿತ್ತು. ಹಾರ್ಮುಝ್ ಜಲಸಂಧಿಯ ಮೂಲಕ ಸಾಗುವ ಹಡಗುಗಳಿಗೆ ಶುಲ್ಕ ವಿಧಿಸಲು ಒಮಾನ್ನೊಂದಿಗೆ ಜಂಟಿ ವ್ಯವಸ್ಥೆಯನ್ನು ಇರಾನ್ ರೂಪಿಸಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಒಮಾನ್ನ ಈ ನಡೆ ಅದಕ್ಕೆ ತಿರುಗುಬಾಣವಾಗಿ ಪರಿಣಮಿಸಿದ್ದು , ಇರಾನ್ ಜೊತೆಗಿನ ಸಂಬಂಧ ಕಡಿದುಕೊಳ್ಳದಿದ್ದರೆ ಬಾಂಬ್ ದಾಳಿ ನಡೆಸುವುದಾಗಿ ಟ್ರಂಪ್ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.
Next Story




