ಗಾಝಾವನ್ನು ನಿಯಂತ್ರಿಸುವ ಟ್ರಂಪ್ ಪ್ರಸ್ತಾವನೆ | ಅಮೆರಿಕದ ಮಿತ್ರರಾಷ್ಟ್ರಗಳ ಸಹಿತ ವ್ಯಾಪಕ ಖಂಡನೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)
ವಾಶಿಂಗ್ಟನ್: ಟ್ರಂಪ್ ಹೇಳಿಕೆಗೆ ಅಮೆರಿಕದ ಮಿತ್ರರಾಷ್ಟ್ರಗಳು ಸೇರಿದಂತೆ ಜಾಗತಿಕ ಸಮುದಾಯದಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಫೆಲೆಸ್ತೀನೀಯರು ತಮ್ಮ ತಾಯ್ನಾಡಿನಲ್ಲಿ ನೆಮ್ಮದಿಯ ಬದುಕು ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಬೇಕು ಎಂದು ಬ್ರಿಟನ್ ವಿದೇಶಾಂಗ ಸಚಿವ ಡೇವಿಡ್ ಲ್ಯಾಮಿ ಹೇಳಿದ್ದಾರೆ. ಗಾಝಾ ಫೆಲೆಸ್ತೀನೀಯರಿಗೆ ಸೇರಿದೆ ಮತ್ತು ಗಾಝಾದ ನಿವಾಸಿಗಳನ್ನು ಉಚ್ಛಾಟಿಸಬಾರದು ಎಂದು ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲಿನಾ ಬೇರ್ಬಾಕ್ ಪ್ರತಿಕ್ರಿಯಿಸಿದ್ದಾರೆ.
ಫ್ರಾನ್ಸ್, ಬ್ರೆಝಿಲ್, ಜೋರ್ಡಾನ್, ಈಜಿಪ್ಟ್, ರಶ್ಯ, ಸೌದಿ ಅರೆಬಿಯಾ ಇತ್ಯಾದಿ ದೇಶಗಳೂ ಟ್ರಂಪ್ ಪ್ರಸ್ತಾಪವನ್ನು ಖಂಡಿಸಿವೆ.
Next Story