ಟ್ರಂಪ್ ಭಾರತ ಭೇಟಿ ರದ್ದು

ಡೊನಾಲ್ಡ್ ಟ್ರಂಪ್ | pc: x
ವಾಷಿಂಗ್ಟನ್, ಆ. 30: ಕ್ವಾಡ್ ಶೃಂಗಸಭೆಗಾಗಿ ವರ್ಷಾಂತ್ಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡುವುದಿಲ್ಲ ಎಂದು ‘ದಿ ನ್ಯೂಯಾರ್ಕ್ ಟೈಮ್ಸ್’ ಶನಿವಾರ ಪ್ರತಿಪಾದಿಸಿದೆ.
ಕಳೆದ ಕೆಲವು ತಿಂಗಳುಗಳಲ್ಲಿ ಟ್ರಂಪ್ ಹಾಗೂ ಮೋದಿ ನಡುವಿನ ಸಂಬಂಧ ಹೇಗೆ ಬದಲಾಗಿವೆ ಎಂಬುದನ್ನು ಈ ವರದಿ ವಿವರವಾಗಿ ತೋರಿಸಿದೆ.
‘‘ಆರಂಭದಲ್ಲಿ ಟ್ರಂಪ್ ಭಾರತದಲ್ಲಿ ವರ್ಷಾಂತ್ಯದಲ್ಲಿ ನಡೆಯಲಿರುವ ಕ್ವಾಡ್ ಶೃಂಗ ಸಭೆಯಲ್ಲಿ ಭಾಗವಹಿಸುವುದಾಗಿ ಮೋದಿ ಅವರಿಗೆ ತಿಳಿಸಿದ್ದರು. ಆದರೆ, ಈಗ ಅವರು ಕ್ವಾಡ್ ಶೃಂಗ ಸಭೆಯಲ್ಲಿ ಭಾಗವಹಿಸುವ ಯೋಜನೆ ಹೊಂದಿಲ್ಲ’’ ಎಂದು ಈ ವಿಷಯದ ಬಗ್ಗೆ ತಿಳಿದಿರುವ ವ್ಯಕ್ತಿಗಳನ್ನು ಉಲ್ಲೇಖಿಸಿ ‘ದಿ ನ್ಯೂಯಾರ್ಕ್ ಟೈಮ್ಸ್’ ಹೇಳಿದೆ.
Next Story





